ಕಾರವಾರ

ಅಂಬಯ್ಯ ನುಲಿಗೆ ಶಿವಲಿಂಗ ಪ್ರಶಸ್ತಿ

ಅಂಬಯ್ಯ ನುಲಿಗೆ ಶಿವಲಿಂಗ ಪ್ರಶಸ್ತಿ

ಬೆಂಗಳೂರು 18: ನಿರಂತರ ಚಟುವಟಿಕಗೆಳಿಗೆ ಹೆಸರಾಗಿರುವ ವಚನಜ್ಯೋತಿ ಬಳಗ ತನ್ನ ಸಂಸ್ಥಾಪಕ ಪಂ.ಕೆ.ಪಿ.ಶಿವಲಿಂಗಯ್ಯನವರ ಹೆಸರಿನಲ್ಲಿ ಸ್ಥಾಪಿಸಿರುವ ಶಿವಲಿಂಗ ಪ್ರಶಸ್ತಿಗೆ ಖ್ಯಾತ ಗಾಯಕ ಪಂ. ಅಂಬಯ್ಯ ನುಲಿ ಆಯ್ಕೆಯಾಗಿದ್ದಾರೆ. ಫೆ.22 ರ ಸೋಮವಾರ ಸಂಜೆ 5 ಗಂಟೆಗೆ ಸಂಸ ಬಯಲು ರಂಗಮಂದಿರದಲ್ಲಿ ನಡೆಯಲಿರುವ ಸಂಸ್ಥಾಪಕರ ದಿನಾಚರಣೆಯಲ್ಲಿ ಶಿವಲಿಂಗ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. 

ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಕಾರ‍್ಯಕ್ರಮ ಉದ್ಘಾಟಿಸಲಿದ್ದು, ಕನ್ನಡ ಸಂಸ್ಕೃತಿ ನಿರ್ದೇಶಕ ಎಸ್.ರಂಗಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ, ಮಾಜಿ ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ, ಕನ್ನಡ ಮಾಣಿಕ್ಯದ ವೀರಕಪುತ್ರ ಶ್ರೀನಿವಾಸ, ಕನ್ನಡ ಪರಿಚಾರಕ ಎಂ.ಪ್ರಕಾಶಮೂರ್ತಿ, ಹಿಂದೂಸ್ಥಾನಿ ವಿದ್ವಾಂಸ ಪಂ. ದೇವೇಂದ್ರಕುಮಾರ ಪತ್ತಾರ ಮೊದಲಾದವರು ಉಪಸ್ಥಿತರಿರುವರು. ಕಾರ್ಯಕ್ರಮದ ಮೊದಲಿಗೆ ಪಂ.ಅಂಬಯ್ಯ ನುಲಿಯವರಿಂದ ವಚನ ಸಂಗೀತವಿದೆ.

ಸುದ್ದಿ ಓದಿ