ತಾಳಿಕೋಟಿ

ಶಿವಭವಾನಿ ದೇವಿಯ ಜಯಂತ್ಯೋತ್ಸವ

ಶಿವಭವಾನಿ ದೇವಿಯ ಜಯಂತ್ಯೋತ್ಸವ


ತಾಳಿಕೋಟೆ06: ಪಟ್ಟಣದ ಕ್ಷತ್ರಿಯ ಮರಾಠಾ ಸಮಾಜದ ವತಿಯಿಂದ ಶನಿವಾರ ರಾಜವಾಡೆಯ ಶಿವಭವಾನಿ ದೇವಿಯ 23ನೇ ಜಯಂತ್ಯೋತ್ಸವನ್ನು ಭಕ್ತಿ, ಶ್ರದ್ಧೆ, ಸಡಗರಗಳಿಂದ ಆಚರಿಸಲಾಯಿತು. 

ಸ್ಥಳೀಯ ಭೀಮನ ಭಾವಿಯಲ್ಲಿ ಗಂಗಸ್ಥಳ ನೆರವೇರಿಸಿದ ನಂತರ ಶಿವ ಭವಾನಿ ಹಾಗೂ ಶಿವಾಜಿ ಮಹಾ ರಾಜರ ಭಾವಚಿತ್ರಗಳ ಭವ್ಯ ಮೆರವಣಿಗೆ ನೆರವೇರಿತು. ಭೀಮನ ಭಾವಿಯಿಂದ ಪ್ರಾರಂಭವಾದ ಮೆರವಣಿಗೆ ಶಿವಾಜಿ ವೃತ್ತ, ಎಮ್‌.ಜಿ.ರಸ್ತೆ, ಕತ್ರಿ ಬಜಾರ ಮೂಲಕ ಹಾಯ್ದು ರಾಜವಾಡೆಯ ಶಿವಭವಾನಿ ಮಂದಿರವನ್ನು ತಲುಪಿತು. ಮೆರವಣಿಗೆಯಲ್ಲಿ 101 ಸುಮಂಗಲೆಯರ ಪೂರ್ಣ ಕುಂಭ, ಡೊಳ್ಳು ಕುಣಿತ, ಬಾಜಾ ಭಜಂತ್ರಿ, ಮ್ಯೂಸಿಕಲ್ ಸಿಸ್ಟಮ್‌ನ ತಾಳಕ್ಕೆ ಯುವಕರು ಹೆಜ್ಜೆ ಹಾಕಿದರು. ನಂತರ ಮಂದಿರದಲ್ಲಿ ಹೋಮ ಹವನ, ಪೂಜಾ ಕಾರ್ಯಕ್ರಮಗಳನ್ನು ಅನಂತಭಟ್ ಜೋಶಿ, ಸಂತೋಷ ಜೋಶಿ, ಗ್ರಾಮಪುರೋಹಿತ, ಗುಂಡುರಾವ ಆಚಾರ್ಯ ನಡೆಸಿಕೊಟ್ಟರು. ನಂತರ ಭಕ್ತರಿಗಾಗಿ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ಮಹಿಳಾ ಮಂಡಳದಿಂದ ಮಹಿಳೆಯರಿಗೆ ಉಡಿ ತುಂಬಲಾಯಿತು. ಗಣ್ಯರಿಗೆ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಸಂಭಾಜಿ ವಾಡಕರ, ಶಶಿಧರ ಡಿಸಲೆ, ಪುರಸಭೆ ಸದಸ್ಯರಾದ ಅಣ್ಣಪ್ಪ ಜಗತಾಪ, ಪರ್ತಕರ್ತ ಜಿ.ಟಿ.ಘೋರೆ​‍್ಡ, ಬಾಬುರಾವ ಶಿಂಧೆ, ರಾಘು ಮಾನೆ, ಶಿವಾಜಿ ಶೇವಳಕರ, ಪುಂಡಲೀಕ ಮೊಹಿತೆ, ಶಿವಾಜಿ ಮೊಹಿತೆ, ಧನಂಜಯ ಶಿಂಧೆ, ಸಂಜಯ ಕದಂ, ವಿಷ್ಣು ಸಾಲುಂಕೆ, ಕಾಶೀನಾಥ ಮೋಹಿತೆ, ವಿಠ್ಠಲ ಜಗತಾಪ, ಸಂತೋಷ ಡಿಸಲೆ, ವಿಠ್ಠಲ ಮೊಹಿತೆ, ನಾರಾಯಣ ಗಾಯಕವಾಡ, ವಿಠ್ಠಲ ಜಗತಾಪ, ಶಾಂತಾಬಾಯಿ ನೂಲಿಕರ, ಗುಂಡುರಾವ ಜಗತಾಪ, ಬಸವಂತ ಸುಭೇದಾರ, ಸಂಬಾಜಿ ಡಿಸಲೆ, ಅಂಬಾಜಿ ಜಾಧವ, ಸಕಾರಾಮ ಸಾಳುಂಕೆ, ಸಂತೋಷ ಪಂದೆ, ಸಂತೋಷ ಕದಂ, ಶ್ರೀನಿವಾಸ ಶೇವಳಕರ  ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ