ರಾಣೆಬೆನ್ನೂರ

ಸಂಭ್ರಮದ ಮಧ್ಯ ಶಿವಾಜಿ ಮಹಾರಾಜರ ತೊಟ್ಟಿಲೋತ್ಸವ.

ಸಂಭ್ರಮದ ಮಧ್ಯ ಶಿವಾಜಿ ಮಹಾರಾಜರ ತೊಟ್ಟಿಲೋತ್ಸವ.
ಇಲ್ಲಿನ ದೊಡ್ಡಪೇಟೆಯ ತುಕ್ಕಾಭವಾನಿ ದೇವಸ್ಥಾನದಲ್ಲಿ ನಡೆದ ಬಾಲ ಛತ್ರಪತಿ ಶಿವಾಜಿ ಮಹಾರಾಜರ ತೊಟ್ಟಿಲೋತ್ಸವದಲ್ಲಿ ಭಾಗವಹಿ

ರಾಣಿಬೆನ್ನೂರ 20: ಇಲ್ಲಿನ ದೊಡ್ಡಪೇಟೆಯ ತುಕ್ಕಾಭವಾನಿ ದೇವಸ್ಥಾನದಲ್ಲಿ ತಾಲೂಕಾ  ಕ್ಷತ್ರೀಯ ಶಿವಾಜಿ ಮರಾಠ ಸಮಾಜದ ವತಿಯಿಂದ ಶಿವಾಜಿ ಜಯಂತ್ಯುತ್ಸವದ ಅಂಗವಾಗಿ ಬಾಲ ಛತ್ರಪತಿ ಶಿವಾಜಿ ಮಹಾರಾಜರ ತೊಟ್ಟಿಲೋತ್ಸವವು ಸಮಾಜ ಭಾಂದವರ, ಭಕ್ತರ ಹಾಗೂ ಅಭಿಮಾನಿಗಳ ಮಧ್ಯ ಶುಕ್ರವಾರದಂದು ಬಹು ವಿಜೃಂಭಣೆಯಿಂದ ನೆರವೇರಿತು.

ಗಂಗೆ ಪೂಜೆ ನೆರವೇರಿಸಿದ ಆನಂತರ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು ವಿವಿಧ ಹೂಗಳಿಂದ ಶೃಂಗರಿಸಿದ ತೊಟ್ಟಿಲಿಗೆ ಬಾಲ ಛತ್ರಪತಿಯ ಭಾವಚಿತ್ರವನ್ನು ಹಾಕಿ ನಾಮಕರಣ ಮಾಡುವ ಮೂಲಕ ಸಂಪ್ರದಾಯವಾಗಿ ಜೋಗುಳ ಹಾಡಿ ಬಾಲ ಶಿವಾಜಿಯನ್ನು ತೊಟ್ಟಿಲು ತೂಗಿ ವಿಶೇಷತೆ ಮೆರೆದರು. 

ಪವಿತ್ರಕುಮಾರ ನಾಗೇನಹಳ್ಳಿ,  ಶಿವಮೂರ್ತಿ ದಿಲ್ಲಿವಾಲ, ಶಿವಾನಂದ ಆರೇರ, ಶಿವಾಜಿ ಮಾಕನೂರ, ಪರಶುರಾಮ ಕಾಳೇರ, ಎಂಎಸ್ ಜಾಧವ್, ನರಸಿಂಹ ಮರಾಠೆ, ಮಾರುತಿ ಜಾಧವ್, ಅರವಿಂದ ಬಣಕಾರ, ಉದಯ ಗಾವಡೆ, ಅನಿಲ್ ಸಿಂಧೆ, ಖಂಡೋಜಿ ತೋಡೆಕರ,  ರಘು ಚವ್ಹಾಣ, ರಾಜು ಜಾಧವ್, ಸುಭಾಸ ಸೂರ್ಯವಂಶಿ, ಸರ್ವಮಂಗಳ ಮಾಕನೂರ, ಕಾಶೀಬಾಯಿ ಮಾದಾಪುರ, ಶಶಿಕಲಾ ಆರೇರ, ಯಲ್ಲಮ್ಮ ಜಾಧವ, ಮಮತಾ ಜಾಧವ, ಶಶಿಕಲಾ ಮರಾಠೆ, ಗಂಗಾ ಜಾಧವ, ನಿರ್ಮಲಾ ಚವ್ಹಾಣ, ಗಿರಿಜಾ ದಿಲ್ಲಿವಾಲ, ಇಂದಿರಾ ಸಿಂಧೆ, ಸುಷ್ಮಾ ಗಾವಡೆ,  ಶೋಭಾ ದಿಲ್ಲಿವಾಲ, ಶೈಲಜಾ ಮಾಕನೂರ ಸೇರಿದಂತೆ ಮತ್ತಿತರರು ಇದ್ದರು. 

ಸುದ್ದಿ ಓದಿ