ಶಿಗ್ಗಾವಿ: ಕೋರ ಕಮೀಟಿಯ ಸಭೆ
ಶಿಗ್ಗಾವಿ 27: ಪಟ್ಟಣದ ಶಾಸಕರ ಮನೆಯಲ್ಲಿ ಶಿಗ್ಗಾವಿ ಮಂಡಲದ ಕೋರ ಕಮೀಟಿಯ ಸಭೆಯು ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಯತೀರ್ಥ ಕಟ್ಟಿ, ಅಧ್ಯಕ್ಷತೆಯನ್ನು ಶಿವಾನಂದ ಮ್ಯಾಗೇರಿ ವಹಿಸಿದ್ದರು, ಮಾಜಿ ಸಂಸದ ಮಂಜುನಾಥ ಕುನ್ನೂರ, ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬೋಜರಾಜ ಕರೂದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶೀಧರ ಹೊಸಳ್ಳಿ, ಮಾಜಿ ಅಧ್ಯಕ್ಷ ದೇವಣ್ಣಾ ಚಾಕಲಬ್ಬಿ, ಪ್ರಧಾನ ಕಾರ್ಯದರ್ಶಿ ರೇಣುಕನಗೌಡ ಪಾಟೀಲ ಉಪಸ್ಥಿತರಿದ್ದರು.