ಶಿಗ್ಗಾವಿ ನಗರ ಕಮೀಟಿಯ ಪದಾಧಿಕಾರಿ ಆಯ್ಕೆ
ಶಿಗ್ಗಾವಿ 18: ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜ್ಯ ಜೀತದಾಳು ಮತ್ತು ಕೃಷಿ ಹಾಗೂ ಕಟ್ಟಡ ಕಾರ್ಮಿಕರ ಒಕ್ಕೂಟದ ಜಿಲ್ಲಾ ಸಂಚಾಲಕ ಸುರೇಶ ಹರಿಜನ ನೇತೃತ್ವದಲ್ಲಿ ಶಿಗ್ಗಾವಿ ನಗರ ಕಮೀಟಿಯ ಪದಾಧಿಕಾರಿಗಳನ್ನು ರವಿವಾರ ಆಯ್ಕೆ ಮಾಡಲಾಯಿತು.
ರಾಜ್ಯ ಜೀತದಾಳು ಶಿಗ್ಗಾವಿ ಕಮೀಟಿ ಅದ್ಯಕ್ಷರಾಗಿ ಮಹ್ಮದ್ಗೌಸ್ ಅಗಸನಮಟ್ಟಿ, ಉಪಾದ್ಯಕ್ಷರಾಗಿ ಮೌಲಾಲಿ ಇಮಾಮ್ಸಾಬ್ ಶೇಖಲ್ಲಿ, ಸಾಬೀಕ್ಅಹ್ಮದ್ ಅಂಬೂರ, ಕಾರ್ಯದರ್ಶಿಯಾಗಿ ಶೇಖರ್ ಲಮಾಣಿ, ಮಹಿಳಾ ಅದ್ಯಕ್ಷರಾಗಿ ಶೋಭಾ ಉಜ್ಜಯನಿಕೊಪ್ಪ, ಫಾತೀಮಾಭಿ ಮುಲ್ಲಾನವರ, ಸದಸ್ಯರಾಗಿ ಶಂಕರ್ ಮಮದಾಪೂರ, ಪರಶುರಾಮ ಈಳಗೇರ, ಸಯ್ಯದ್ ಗುಲಾಮ ರಬ್ಬಾನಿ ಹಾಪೀಜ್, ಸುರೇಶ ಹರಿಜನ, ನಜುಭೀನ್ ನೂರಹ್ಮದ್ ಬೆಳಗಾಂವಕರ್ ಆಯ್ಕೆಯಾದರು.
ಆಯ್ಕೆಯಾದ ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡಿ ಮಾತನಾಡಿದ ಹಿರಿಯ ಮುಖಂಡ ಫಕ್ಕೀರ್ಪ ಕುಂದೂರ, ಸೌಲಭ್ಯ ವಂಚಿತ ತಳಮಟ್ಟದ ಬಡವರಿಗೆ ನಿಮ್ಮ ಸೇವೆ ನಿರಂತರವಾಗಿರಲಿ ಎಂದರು.
ಹಿರಿಯ ಸಂಘಟನಾಕಾರ ಅಶೋಕ ಕಾಳೆ ಮಾತನಾಡಿ ನೊಂದವರ ಪರವಾಗಿ ನಿಂತ ಸರಕಾರದ ಸೌಲಭ್ಯ ಕೊಡಿಸಿ ಸೇವೆ ಮಾಡಿ ಮುಂದೋಂದು ದಿನ ನೀವು ಮಾದರಿ ವ್ಯಕ್ತಿಗಳಾಗುತ್ತೀರಿ ಎಂದರು.
ಈ ಸಂದರ್ಭದಲ್ಲಿ ಮುಖಂಡರು ಹಾಗೂ ಜೀವಿಕ ಸಂಘಟನೆಯ ಇತರ ಪಧಾಧಿಕಾರಿಗಳು ಇದ್ದರು.