ಪ್ರವಾಹ ಪೀಡಿತ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ
ತಾಳಿಕೋಟೆ24: ಕಳೆದ ಮೂನರ್ಾಲ್ಕು ದಿನಗಳಿಂದ ಜಿಲ್ಲೆಯಾಧ್ಯಂತ ಸುರಿದ ಭಾರಿ ಮಳೆಯಿಂದಾಗಿ ಡೋಣಿ ನದಿಯಲ್ಲಿ ಭಾರಿ ಪ್ರವಾಹ ಪರಸ್ಥಿತಿ ಉಂಟಾಗಿದ್ದು, ತಾಲೂಕಿನ ಹರನಾಳ ಗ್ರಾಮದ ಬಳಿ ಸೇತುವೆ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರರನ ಟ್ಯಾಕ್ಟರ್ ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳು ನೀರಿನಲ್ಲಿ ಸಿಲುಕಿದ ಘಟನೆ ನಡೆದಿದೆ.
ಜಿಲ್ಲೆಯಾಧ್ಯಂತ ಸುರಿದ ಭಾರಿ ಮಳೆಯಿಂದಾಗಿ ಡೋಣಿ ನದಿ ತುಂಬಿ ಹರಿಯುತ್ತಿದೆ. ಡೋಣಿ ನದಿ ಪಟ್ಟಣಕ್ಕೆ ಹೊಂದಿಕೊಂಡು ತಾಲೂಕಿನಾದ್ಯಂತ ಹರಿಯುತ್ತಿದೆ. ತಾಲೂಕಿನ ಹರನಾಳ ಗ್ರಾಮದಿಂದ ತಾಳಿಕೋಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಡೋಣಿ ನದಿಗೆ ಅಡ್ಡಲಾಗಿ ಸೇತುವೆ ನಿಮರ್ಿಸುವ 3 ಕೋಟಿ ವೆಚ್ಚದ ಕಾಮಗಾರಿ ಆರಂಭವಾಗಿದೆ. ಕಾಮಗಾರಿ ಮಾಡಲು ಡೋಣಿ ನದಿ ನೀರನ್ನು ಡೈವೋರ್ಟ ಮಾಡಿ ಕಳೆದ ಒಂದು 15 ದಿನಗಳಿಂದ ಭರ್ಜರಿಯಾಗಿ ಕಾಮಗಾರಿ ನಡೆಸಲಾಗುತ್ತಿತ್ತು. ನೀರನ್ನು ಡೈವೋರ್ಟ ಮಾಡಿರುವದರಿಂದ ಕಾಮಗಾರಿಗೆ ಬಳಸುವ ಟ್ಯಾಕ್ಟರ್, ಕಬ್ಬಿಣ, ಸಿಮೇಂಟ್ ಸೇರಿದಂತೆ ಗುತ್ತಿಗೆದಾರನ ಸಾಮಗ್ರಿಗಳನ್ನು ಡೋಣಿ ನದಿಯಲ್ಲಿಯೇ ಬಿಡಲಾಗಿತ್ತು. ಶನಿವಾರ ಕಾಮಗಾರಿ ಮಾಡಿ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಹೋಗಲಾಗಿತ್ತು. ಆದರೆ ಶನಿವಾರ ಸಂಜೆ ಏಕಾಏಕಿ ಡೋಣಿ ನದಿಗೆ ಪ್ರವಾಹ ಬಂದಿದ್ದರಿಂದಾಗಿ ಗುತ್ತಿಗೆದಾರರನ ಸಾಮಗ್ರಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಸೇತುವೆ ಕಾಮಗಾರಿಗೆ ತೋಡಲಾಗಿದ್ದ ತೆಗ್ಗು ಸೇರಿದಂತೆ ಮಾಡಿದ್ದ ಕಾಮಗಾರಿ ಮಣ್ಣಿನಿಂದ ಮುಚ್ಚಿ ಹೋಗಿದೆ. ಟ್ಯಾಕ್ಟರ್, ನೀರಿನ ಟ್ಯಾಂಕರ ಪೂರ್ಣ ನೀರಿನಲ್ಲಿ ಮುಳುಗಿದೆ. ನೀರೆತ್ತುವ ಆಯಿಲ್ ಇಂಜಿನ್, ಕಬ್ಬಿಣ ಸಾಮಗ್ರಿಗಳು, ಮರಳು, ಜಲ್ಲಿ ಕಲ್ಲುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಇದರಿಂದ ಗುತ್ತಿಗೆದಾರ ಸುಮಾರು 10 ಲಕ್ಷಕ್ಕೂ ಮೊತ್ತದ ಸಾಮಗ್ರಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.
ಪ್ರವಾಹದಲ್ಲಿ ಟ್ಯಾಕ್ಟರ್ ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳು ಸಿಲುಕಿರುವ ವಿಷಯ ತಿಳಿದು ರವಿವಾರ ತಡರಾತ್ರಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ, ಹೆಚ್ಚುರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ದಿ, ತಹಶೀಲ್ದಾರ ಅನೀಲಕುಮಾರ ಢವಳಗಿ, ತಾಪಂ ಕಾರ್ಯನಿವರ್ಾಹಕ ಅಧಿಕಾರಿ ಬಿ.ಆರ್.ಬಿರಾದಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ನಷ್ಟವಾದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಅಗ್ನಿಶಾಮಕ ಇಲಾಖೆ ತಂಡವನ್ನು ಕರೆಸಿ ಪ್ರವಾಹದಲ್ಲಿ ಸಿಲುಕಿದ ಟ್ಯಾಕ್ಟರ್ ಹೊರತೆಗೆಯುವ ಪ್ರಯತ್ನವನ್ನು ಮಾಡಲಾಯಿತು. ಆದರೆ ಟ್ಯಾಕ್ಟರ್ ಸಿಲುಕಿದ ಕಡೆಯಲ್ಲಿ ಬಿರುಸಾದ ಪ್ರವಾಹ ಇರುವದರಿಂದ ಟ್ಯಾಕ್ಟರ್ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇಲ್ಲದಿರುವದರಿಂದ ಪ್ರವಾಹ ಪರಸ್ಥಿತಿ ಕಡಿಮೆಯಾದ ನಂತರ ಟ್ಯಾಕ್ಟರ್ ಹೊರತೆಗೆಯುವ ನಿಧರ್ಾರವನ್ನು ಮಾಡಲಾಗಿದೆ. ಅಲ್ಲದೇ ಕೆಳಹಂತದ ಅಧಿಕಾರಿಗಳಿಗೆ ಮುಂಜಾಗ್ರತಾ ಕ್ರಮವಾಗಿ ಘಟನಾ ಸ್ಥಳದಲ್ಲೇ ಬೀಡುಬಿಡುವಂತೆ ಸೂಚನೆ ಜಿಲ್ಲಾಧಿಕಾರಿಗಳು ನೀಡಿದರು. ಸ್ಥಳದಲ್ಲಿಯೇ ಅಗ್ನಿ ಶಾಮಕ ಅಧಿಕಾರಿಗಳು, ಕಂದಾಯ ಇಲಾಖೆ, ಪೊಲೀಸ್ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.
ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಮಳೆ ಕಡಿಮೆಯಾಗಿದ್ದು ಸೋಮವಾರ ಎಂದಿನಂತೆ ಪ್ರವಾಹ ಪರಸ್ಥಿತಿ ಮುಂದುವರೆದಿತ್ತು. ಪಟ್ಟಣದಿಂದ ಹಡಗಿನಾಳ ರಸ್ತೆಯಲ್ಲಿರುವ ಕೆಳಮಟ್ಟದ ಡೋಣಿ ನದಿ ಸೇತುವೆ ಮುಳುಗಡೆಯಾಗಿತ್ತು. ಆದರೆ ಸಂಜೆಯಾಗುತ್ತಿದ್ದಂತೆ ಪ್ರವಾಹ ಪರಸ್ಥಿತಿ ಕಡಿಮೆಯಾಗಿದ್ದರಿಂದ ಸೇತುವೆ ಮೇಲಿನ ನೀರು ಕಡಿಮೆಯಾಗಿತ್ತು. ಆದರೆ ಸಂಚಾರ ಆರಂಭವಾಗಿದ್ದಿಲ್ಲ. ಪ್ರವಾಹ ಕಡಿಮೆಯಾಗಿದ್ದರಿಂದ ಮನಗೂಳಿ ದೇವಾಪೂರ ರಾಜ್ಯ ಹೆದ್ದಾರಿ ಮುಳಗಡೆ ಭೀತಿ ಕಡಿಮೆಯಾಗಿದೆ. ಅಕಾಲಿಕ ಮಳೆ ಸೃಷ್ಠಿಸಿದ ಅವಾಂತರ ಸಾಕಷ್ಟಿದೆ. ಕೂಡಲೇ ಮಳೆಗಾಲ ಆರಂಭವಾಗುವ ಮುಂಚೆ ಜಿಲ್ಲಾಢಳಿತ ಎಚ್ಚೆತ್ತುಕೊಂಡು ಪ್ರವಾಹ ಂದರೂ ಸಹಿತ ಸಂಚಾರಕ್ಕೆ ಅನಕೂಲಕ ಕಲ್ಪಿಸಿಕೊಡಬೇಕಾಗಿದೆ.