‘ಗಂಜೀಗಟಿ ಶ್ರೀಗಳು ಮಾತೃಹೃದಯದ ಜೀವಿಗಳು’
ಶಿಗ್ಗಾವಿ 22 : ಮದುವೆ ಎಂಬುದು ಎರಡು ಜೀವಗಳ ಸಂಬಂಧವಾಗಿದೆ, “ದೇಹ ದೇಹಗಳಿಗೆ ಮದುವೆ ಮಾಡುವುದು ಅದು ಕಾಮವಯ್ಯ, ಮನಸ್ಸು ಮನಸ್ಸುಗಳಿಗೆ ಮದುವೆ ಮಾಡುವುದು ಅದು ಪ್ರೇಮವಯ್ಯ” ಎಂಬ ಮಾತಿನಂತೆ ಇದು ಮನಸ್ಸುಗಳ ಮದುವೆಯಾಗಲು ನಿರ್ಮಿಸಿರುವ ಕಲ್ಯಾಣ ಮಂಟಪವಾಗಿದ್ದು ಕಷ್ಟದಲ್ಲಿರುವ ಬಡ ಜನರಿಗೆ ಅನುಕೂಲವಾಗಲೆಂದು ನಿತ್ಯನೂತನ ಧಾರಾ ನಿಳಯ ಎಂಬ ಕಲ್ಯಾಣ ಮಂಟಪವನ್ನು ತೆರೆದಿರುವುದು ಗಂಜೀಗಟ್ಟಿ ಶ್ರೀಗಳ ಸರಳತೆಯನ್ನು ತೋರಿಸಿಕೊಡುತ್ತದೆ ಎಂದು ಹುಕ್ಕೇರಿಯ ಶಟಸ್ಥಲ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಬುಧವಾರ ತಾಲೂಕಿನ ಗಂಜೀಗಟ್ಟಿ ಮಠಕ್ಕೆ ಭೇಟಿ ನೀಡಿ ಶ್ರೀಗಳನ್ನು ಸನ್ಮಾನಿಸಿ, ನಂತರ ಗಂಜೀಗಟ್ಟಿ ಶ್ರೀಗಳಿಂದ ಸನ್ಮಾನಿತರಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶ್ರೇಷ್ಟ ಸಾಹಿತಿಗಳಾಗಿರುವ ಗಂಜೀಗಟಿ ಶ್ರೀಗಳು ಮಾತೃಹೃದಯದ ಜೀವಿಗಳು ಜೊತೆಗೆ ಸರಳ ವ್ಯಕ್ತಿತ್ವವುಳ್ಳವರಾಗಿದ್ದು ಮಠದ ಭಕ್ತರೇ ಎಲ್ಲ ಎಂದು ತಿಳಿದವರಾಗಿದ್ದು ಎಲ್ಲ ಸಮುದಾಯಗಳನ್ನು ತಮ್ಮ ತೋಳತೆಕ್ಕೆಯಲ್ಲಿ ತೆಗೆದುಕೊಂಡು ಹೋಗುವವರಾಗಿದ್ದಾರೆ, ಆದ್ದರಿಂದ ಸರಳತೆಗೆ ಇನ್ನೊಂದು ಹೆಸರೇ ಗಂಜೀಗಟ್ಟಿಯ ಶ್ರೀಗಳಾಗಿದ್ದಾರೆ, ಇಂತಹ ಸರಳ ವ್ಯಕ್ತಿತ್ವದ ಗಂಜೀಗಟ್ಟಿ ಚರಮೂರ್ತೇಶ್ವರ ಮಠದ ಶತಸ್ಥಲ ಬ್ರಹ್ಮಿ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಮಾರ್ಗದರ್ಶನ ಇಡಿ ರಾಜ್ಯಕ್ಕೆ ಇರಲಿ ಎಂದರು.
ಗಂಜೀಗಟ್ಟಿ ಚರಮೂರ್ತೇಶ್ವರ ಮಠದ ಶತಸ್ಥಲ ಬ್ರಹ್ಮಿ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಹಾಗೂ ಮಠದ ಭಕ್ತರು ಇದ್ದರು.