ರೈತ ಕಾರ್ಮಿಕರ ಒಳತಿಗಾಗಿ ಬಾಗಿನ ಅರ್ಪಣೆ
ಶಿಗ್ಗಾವಿ 28: ನಾಡಿನ ಸಮಸ್ತ ರೈತ ಕುಲಕ್ಕೆ ಹಾಗೂ ರೈತ ಕಾರ್ಮಿಕರಿಗೆ ಒಳಿತಾಗಬೇಕು, ಅವರು ಬೆಳೆದ ಬೆಳೆ ಚನ್ನಾಗಿ ಬರಬೇಕು ಎನ್ನುವ ಉದ್ದೇಶದಿಂದ ವರದಾ ತಾಯಿಗೆ ಬಾಗಿನ ಅರ್ಪಿಸಿದ್ದೇವೆ ಎಂದು ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಹಾಗೂ ಸಿ ಬಿ ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಹೇಳಿದರು.
ಕುಣಿಮೇಳ್ಳಿಹಳ್ಳಿ ಗ್ರಾಮದ ಹತ್ತಿರ ಇರುವ ವರದಾ ನದಿಗೆ ದಂಪತಿ ಸಮೇತ ಬಾಗಿನ ಅರ್ಪಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರೈತರ ಬಾಳು ಹಸನಾಗಬೇಕು ಮತ್ತು ಶಿಗ್ಗಾವಿ ಸವಣೂರ ಕ್ಷೇತ್ರದ ಜನತೆಯು ಸುಖವಾಗರಬೇಕು ಎನ್ನುವ ಉದ್ದೇಶದಿಂದ ಭಾಗಿನ ಅರ್ಪಿಸುವ ಕಾರ್ಯವನ್ನು ನಮ್ಮ ಸಂಘ ಹಮ್ಮಿಕೊಂಡಿದೆ ಎಂದರು.
ಕುರುಬ ಸಮಾಜದ ಅದ್ಯಕ್ಷ ಫಕ್ಕಿರಪ್ಪ ಕುಂದೂರ ಮಾತನಾಡಿ ನಾಡಿಗೆ ಒಳಿತನ್ನು ಬಯಸಿ ಈ ಕಾರ್ಯ ಮಾಡಿದ ಶಶಿಧರ ಯಲಿಗಾರ ಅವರು ತಮ್ಮ ಜನಪರ ಕಾಳಜಿ ತೊರಿದ್ದಾರೆ ಎಂದರು.
ರೈತ ಧ್ವನಿ ಸಂಪಾದಕ ಬಸವರಾಜ ಕುರಗೋಡಿ ಮಾತನಾಡಿ, ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಆಶ್ರಯದಲ್ಲಿ ಶಶಿಧರ ಯಲಿಗಾರ ಅವರ ನೇತೃತ್ವದಲ್ಲಿ ನಾಡಿಗೆ ಒಳಿತಾಗಲಿ ಎಂದು ಭಾಗಿನ ಅರ್ಿಸುವ ಕಾರ್ಯ ಮಾಡಲಾಗಿದೆ ಅದೇ ರೀತಿ ನಮ್ಮ ಸಂಘ ರೈತರ ಪರವಾದ ಕಾರ್ಯಗಳನ್ನು ಮಾಡುತ್ತದೆ ಎಂದರು.
ಈ ಸಂಧರ್ಭದಲ್ಲಿ ಸಮಾಜ ಸೇವಕರಾದ ಅಶೋಕ ಕಾಳೆ, ಸುರೇಶ ಹರಿಜನ, ವೆಂಕಟೇಶ ಬಂಡಿವಡ್ಡರ ಮಹ್ಮದ್‌ಗೌಸ್ ಅಗಸನಮಟ್ಟಿ, ಮೌಲಾಲಿ ಇಮಾಮ್‌ಸಾಬ್ ಶೇಖಲ್ಲಿ, ಸಾಬೀಕ್‌ಅಹ್ಮದ್ ಅಂಬೂರ, ಶೋಭಾ ಉಜ್ಜಯನಿಕೊಪ್ಪ, ಪರಶುರಾಮ ಈಳಗೇರ, ಸೇರಿದಂತೆ ಶಶಿಧರ ಯಲಿಗಾರ ಅಭಿಮಾನಿ ಭಳಗದ ಪದಾಧಿಕಾರಿಗಳು ಗ್ರಾಮಸ್ಥರು ಇದ್ದರು.