ಶಿಗ್ಗಾವ್

ಶರಣ ಸಂಸ್ಕೃತಿಮಾನವೀಯ ಸಂಬಂಧಗಳ ಬೆಲೆ ತಿಳಿಸುತ್ತವೆ ಡಾ. ಸೊಬಟಿ

ಶರಣ ಸಂಸ್ಕೃತಿಮಾನವೀಯ ಸಂಬಂಧಗಳ ಬೆಲೆ ತಿಳಿಸುತ್ತವೆ  ಡಾ. ಸೊಬಟಿ

ಶಿಗ್ಗಾವಿ 06: ಶರಣ ಸಂಸ್ಕೃತಿ ಉತ್ಸವಗಳು ಸಾಮಾಜಿಕ ಗೌರವದ ಜೊತೆಗೆ ಮಾನವೀಯ ಸಂಬಂಧಗಳ ಬೆಲೆಯನ್ನು ತಿಳಿಸುತ್ತವೆ ಎಂದು ಜಾನಪದ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ ಹೇಳಿದರು.

ಗುರುವಾರ ಪಟ್ಟಣದ ವಿರಕ್ತಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವ-2021 ಲಿಂ ಮನಿಪ್ರ ಸಂಗನಬಸವ ಮಹಾಸ್ವಾಮಿಗಳ ಪುಣ್ಯಾರಾಧನೆಯ 2ನೇ ದಿನದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಶರಣ ಸಂಸ್ಕೃತಿ ಉತ್ಸವ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಆರ್ಥಿಕ ಬದಲಾವಣೆಯಲ್ಲಿ ಶರಣ ಸಂಸ್ಕೃತಿಯ ಪಾತ್ರ ಮಹತ್ವದ್ದಾಗಿದೆ, ಭಾಷೆಗೆ ಅಗ್ರ ಸ್ಥಾನ ನೀಡುವದರ ಜೊತೆಗೆ ಎಲ್ಲ ಜೀವಿಗಳು ಬದುಕುವಂತೆ ಪ್ರೇರೆಪಿಸುತ್ತದೆ, ಸಂಸ್ಕೃತಿಯನ್ನು ತಿಳಿಸುವದರ ಜೊತೆಗೆ ಶಿವಂತಾಗುವ ತಾತ್ವೀಕ ಪರಿಕಲ್ಪನೆಯನ್ನು ನೀಡುತ್ತದೆ, ಅಜ್ಞಾನವನ್ನು ಹೊಡೊದೊಡಿಸುತ್ತದೆ, ಧಾನ ಧರ್ಮಗಳ ಮಹತ್ವ ತಿಳಿಸುತ್ತದೆ, ಧಾರ್ಮಿಕ ಚಿಂತನೆಗಳ ಪರಿಕಲ್ಪನೆಯನ್ನು ಜಾಗೃತಗೊಳಿಸುತ್ತದೆ ಕಾಯಕ ನಿಷ್ಠೇ, ಕಾಯಕ ಗೌರವ ಹಾಗೂ ಸಾಮಾಜಿಕ ನ್ಯಾಯವನ್ನು ತಿಳಿಸಿಕೊಡುತ್ತದೆ ಎಂದರು.

ಸಂಗನಬಸವ ಮಹಾಸ್ವಾಮಿಗಳು ಸಾನಿದ್ಯ ವಹಿಸಿ ಮಾತನಾಡಿ ಒಳ್ಳೆಯ ನುಡಿಯಿಂದ ಹಾಗೂ ನಡೆಯಿಂದ ಮಾತ್ರ ಧರ್ಮ ಜಾಗೃತವಾಗುತ್ತದೆ ಎಂದರು. ಇದಕ್ಕೂ ಮೊದಲು ಮಮ್ಮಿಗಟ್ಟಿಯ ವಿ ರಾಜೇಶ್ವರ ವಿರಕ್ತಮಠದ ಡಾ. ಬಸವಾನಂದ ಮಹಾಸ್ವಾಮಿಗಳಿಂದ ಪ್ರವಚನ ನಡೆಯಿತು, ಅವರಿಗೆ ಅಸುಂಡಿಯ ಹನಮಂತ ಪಾದಗಟ್ಟಿ ಸಂಗೀತ ಸೇವೆ ಮತ್ತು ಚಿತ್ರದುರ್ಗದ ಎಮ್ ಜ್ಞಾನಮೂರ್ತಿ ತಬಲಾ ಸೇವೆಯನ್ನು ನೀಡಿದರು. 

ಕಾರ್ಯಕ್ರಮದಲ್ಲಿ ಧರ್ಮಕಾರ್ಯದ ದಾನಿಗಳನ್ನು ಮತ್ತು ಪ್ರಸಾದ ಸೇವೆಯ ದಾನಿಗಳನ್ನು ಸನ್ಮಾನಿಸಲಾಯಿತು, ಕಲಾವಿಧ ಶರೀಫ ಮಾಕಪ್ಪನವರ ಕಾರ್ಯಕ್ರಮ ನಿರ್ವಹಿಸಿದರು.

ಸುದ್ದಿ ಓದಿ