ಶರಣ ಸಂಸ್ಕೃತಿ ಉತ್ಸವ ಮೌಲ್ಯಗಳನ್ನು ಬೋಧಿಸುವ ಮಾರ್ಗದರ್ಶಿ : ಇಂಧೂದರ ಮುತ್ತಳ್ಳಿ
ಶಿಗ್ಗಾವಿ 09: ಮಾನವೀಯ ಮೌಲ್ಯಗಳು ಮನುಷ್ಯನ ಬದುಕಿನ ಆಧಾರ ಸ್ತಂಭಗಳಿದ್ದಂತೆ ಶರಣ ಸಂಸ್ಕೃತಿ ಉತ್ಸವಗಳು ಬದುಕಿನ ಮಾನವೀಯ ಮೌಲ್ಯಗಳನ್ನು ಬೋಧಿಸುವಂತಹ ಮಾರ್ಗದರ್ಶಿ ಎಂದು ಬಿಸಿಎಂ ಇಲಾಖೆ ತಾಲೂಕ ಅಧಿಕಾರಿ ಇಂದೂಧರ ಮುತ್ತಳ್ಳಿ ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ 32ನೇ ಶರಣ ಸಂಸ್ಕೃತಿ ಉತ್ಸವ-2025 ರ ಅಂಗವಾಗಿ ನಡೆದ ಧರ್ಮ ಸಮಾರಂಭದಲ್ಲಿ ಮಾತನಾಡಿದ ಅವರು ಯುವಜನರು ಅವುಗಳನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿರಬೇಕು. ಮೌಲ್ಯಗಳಿಲ್ಲದ ಜೀವನ ವ್ಯರ್ಥ ಅವುಗಳನ್ನು ಅಳವಡಿಸಿಕೊಂಡಾಗ ಜೀವನ ಸಾರ್ಥಕಗೊಳ್ಳುವುದು. ಹೀಗಾಗಿ ಮಕ್ಕಳಿಗೆ ಇಂತಹ ಶರಣ ಸಂಸ್ಕೃತಿ ಗೀಳು ಬೆಳೆಸಬೇಕು ಎಂದು ಹೇಳಿದರು.
ಸೀತಾಗಿರಿ ಎ.ಸಿ.ವಾಲಿ ಮಹಾರಾಜರು ಪ್ರವಚನ ನೀಡಿದರು. ವಿರಕ್ತಮಠದ ಸಂಗನಬಸವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಬಸವ ದೇವರು ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಸದಸ್ಯ ಸುಭಾಸ ಚವ್ಹಾಣ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿನ ಸಾಧಕರಿಗೆ ಮತ್ತು ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಉಪನ್ಯಾಸಕ ಶಶಿಕಾಂತ ರಾಠೋಡ, ಪಿ.ಎಸ್.ಐ. ಶಿವಾನಂದ ಎಸ್, ರಮೇಶ ವನಹಳ್ಳಿ, ಶಿವಾನಂದ ಹೊಸಮನಿ, ಗಂಗನಗೌಡ ಪಾಟೀಲ, ಈರಣ್ಣ ಅಂಕಲಕೋಟಿ, ಫಿರೋಜ್ ಕಾಮನಹಳ್ಳಿ, ಪ್ರಕಾಶ ವೇರ್ಣೇಕರ ಸೇರಿದಂತೆ ದೇವಸ್ಥಾನದ ಸೇವಾ ಸಮಿತಿ ಸದಸ್ಯರು ಇದ್ದರು. ನಟರಾಜ ನಾಟ್ಯ ಶಾಲೆ ವೈಷ್ಣವಿ ತಿಮ್ಮಾಪುರ, ಶ್ರೇಯಾ ಪಾಟೀಲ ಅವರಿಂದ ಭರತನಾಟ್ಯ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.