ಶಿಗ್ಗಾವ್

ಶರಣ ಸಂಸ್ಕೃತಿ ಉತ್ಸವ

ಶರಣ ಸಂಸ್ಕೃತಿ ಉತ್ಸವ

ಶಿಗ್ಗಾವಿ 10: ಪಟ್ಟಣದ ವಿರಕ್ತಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವ-2021 ಸಂಗನಬಸವ ಮಹಾಸ್ವಾಮಿಗಳ ಪುಣ್ಯಾರಾಧನೆಯ  ಕಾರ್ಯಕ್ರಮದಲ್ಲಿ  ಬೆಳಕು ಸಾಹಿತ್ಯ ಪರಿಷತ್ತ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಹೋಗದೇ ಇರುವ ತಾಲೂಕಿನ ರೈತ ಸಂಘದ ಅಧ್ಯಕ್ಷ ಬಸಲಿಂಗಪ್ಪ ನರಗುಂದ, ಶಂಭುಲಿಂಗಪ್ಪ ಕೇರಿ, ಮಾಂತೇಶ ನಾಯ್ಕೋಡಿ, ಚನ್ನಬಸಪ್ಪ ಭದ್ರಶೆಟ್ಟಿ, ಸಂತೋಷ ಕಟ್ಟಿಮನಿ ಇವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು, ಡಾ. ಬಸವನಾಂದ ಶ್ರೀಗಳು ಮತ್ತು  ಬಸವ ದೇವರು, ವರದಿಗಾರ ಬಸವರಾಜ.ವ್ಹಿ.ಹೆಚ್, ಬಿ.ಜೆ.ಪಿ ಪ್ರದಾನ ಕಾರ್ಯದರ್ಶಿ ಸಂಜನಾ ರಾಯ್ಕರ್, ಸಾಮಾಜಿಕ ಕಾರ್ಯಕರ್ತೆ ರಾಜೇಶ್ವರಿ ಹಿರೇಮಠ,  ಉಪಸ್ಥಿತರಿದ್ದರು.

ಸುದ್ದಿ ಓದಿ