ತಾಳಿಕೋಟಿ

ಶರಣ-ಸಂತರು ಒಂದು ಧರ್ಮಕ್ಕೆ ಸೀಮಿತರಲ್ಲ

ಶರಣ-ಸಂತರು ಒಂದು ಧರ್ಮಕ್ಕೆ ಸೀಮಿತರಲ್ಲ

ತಾಳಿಕೋಟಿ: ಜಗತ್ತಿಗೆ ಮಾನವೀಯತೆಯ ಸಂದೇಶವನ್ನು ಸಾರಿದ ಶರಣ-ಸಂತರು ಹಾಗೂ ಮಹಾಪುರಷರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಬಾರದು ಎಂದು ಹಿರೂರ ಗ್ರಾ.ಪಂ. ಉಪಾಧ್ಯಕ್ಷ ಎ.ಎಂ.ಚಪ್ಪರಬಂದ ತಿಳಿಸಿದರು. 

ಶನಿವಾರ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತಿ ಅಂಗವಾಗಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಭಾವಚಿತ್ರ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿವಾಜಿ ಮಹಾರಾಜರು ಕೇವಲ ಮರಾಠಾ ಸಮಾಜದ ಉದ್ಧಾರಕ್ಕಾಗಿ ಮಾತ್ರ ಹೋರಾಡದೆ ದೇಶದ ಎಲ್ಲ ವರ್ಗದಜನರ ಏಳಿಗೆಗಾಗಿ ಅಪ್ರತಿಮ ಹೋರಾಟ ನಡೆಸಿದ ವೀರರಾಜ. ಅವರ ಶೌರ್ಯ ಹಾಗೂ ಸಾಹಸಗಳು ಇಂದಿನ ಯುವ ಪೀಳಿಗೆಗೆ ಮಾದರಿ ಯೋಗ್ಯವಾಗಿವೆ. ಈ ಎಲ್ಲ ಮಹಾನುಬಾವರು ಸಾರಿದ ಮಾನವೀಯತೆ ಹಾಗೂ ಸಾಮರಸ್ಯದ ಸಂದೇಶವನ್ನು ನಾವೆಲ್ಲರೂ ಅನುಸರಿಸುವ ಅಗತ್ಯ ಇದೆ ಎಂದರು. 

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಸುರೇಶಗೌಡ ಬಿರಾದಾರ, ಮಾಜಿ ಸದಸ್ಯ ಬಸವರಾಜ ಬಡಿಗೇರ, ಗಣ್ಯರಾದ ಮಹಾಂತಗೌಡ ಬಿರಾದಾರ, ಬಸವರಾ ಜಛಲವಾದಿ ಹುಸೇನ ಭಾಷಾ ಚಪ್ಪರಬಂದ, ಈಶ್ವರ​‍್ಪ ಉಪ್ಪಾರ, ಮಲ್ಲು ಇಂಗಳೇಶ್ವರ, ಅಶೋಕ ನಾಟಿಕಾರ, ಗ್ರಾ.ಪಂ. ಕಾರ್ಯದರ್ಶಿ ಎಚ್‌.ಜಿ.ಚೌದ್ರಿ, ಮುತ್ತುರಾಜ ಚವ್ಹಾಣ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ