ಶಾಂತಪ್ಪಣ್ಣಾ ಮಿರಜಿ ಬ್ಯಾಂಕ ಹಾರೂಗೇರಿ ಶಾಖೆ ಪ್ರಾರಂಭ
ಹಾರೂಗೇರಿ 28: ಬ್ಯಾಂಕು ಜನರ ಹಿತವನ್ನು ಬಯಸುತ್ತಿರಬೇಕು. ಹಣ ಇಡುವವರನ್ನು ಗೌರವಿಸಿ, ಒಯ್ಯುವವರಿಗೆ ಒಳ್ಳೆಯದಾಗಲೆಂದು ಪ್ರಾರ್ಥನೆ ಮಾಡಬೇಕು. ಬ್ಯಾಂಕಿನ ಅಧಿಕಾರಿಗಳು ಪ್ರಾಮಾಣಿಕರಾಗಿದ್ದು, ಬ್ಯಾಂಕಿನ ಈ ಮೂರು ತತ್ವಗಳನ್ನು ಪಾಲಿಸುವುದರಿಂದ ಬ್ಯಾಂಕುಗಳು ಬೆಳೆಯುತ್ತವೆ ಎಂದು ಸಹಕಾರಿ ಧುರೀಣ ಡಿ.ಸಿ.ಸದಲಗಿ ಹೇಳಿದರು.
ಪಟ್ಟಣದಲ್ಲಿ ಗುರುವಾರ ಶಾಂತಪ್ಪಣ್ಣಾ ಮಿರಜಿ ಅರ್ಬನ್ ಕೋ-ಆಪ್ ಬ್ಯಾಂಕ ಚಿಕ್ಕೋಡಿಯ ಹಾರೂಗೇರಿಯಲ್ಲಿ 14ನೇ ನೂತನ ಶಾಖೆಯ ಪ್ರಾರಂಭೋತ್ಸವದಲ್ಲಿ ಅವರು ಮಾತನಾಡಿದರು.
ಗಣ್ಯರಾದ ಸಿದ್ದಪ್ಪ ನಾಗನೂರ ಮಾತನಾಡುತ್ತ ಸಿಬ್ಬಂದಿಯ ಶಿಸ್ತು, ಅಧಿಕಾರಿಗಳ ದಕ್ಷತೆ, ಆಡಳಿತ ಮಂಡಳಿಯ ಪ್ರಾಮಾಣಿಕತೆ, ಗ್ರಾಹಕರ ವಿಶ್ವಾಸ ಹಾಗೂ ಸದಸ್ಯರ ಪ್ರೀತಿ ಸಹಕಾರ ಬ್ಯಾಂಕಿನ ಪಂಚಪ್ರಾಣಗಳು. ಗ್ರಾಹಕರೊಂದಿಗೆ ಗೌರವ, ಉತ್ತಮ ನಡತೆ, ಒಳ್ಳೆಯತನ ಹಾಗೂ ಕೈ ಮನಸ್ಸುಗಳ ಪರಿಶುದ್ಧತೆಯಿಂದ ಬ್ಯಾಂಕುಗಳು ಪ್ರಗತಿ ಸಾಧಿಸಲು ಸಾಧ್ಯವಿದೆ ಎಂದು ಹೇಳಿದರು.
ಬ್ಯಾಂಕಿನ ಅಧ್ಯಕ್ಷ ಸುರೇಶ ಘರಬುಡೆ ಶಾಖೆಯನ್ನು ಉದ್ಘಾಟಿಸಿದರು. ಉಪಾಧ್ಯಕ್ಷ ಅನೀಲ ಸದಲಗೆ, ಬ್ಯಾಂಕಿನ ನಿರ್ದೇಶಕರಾದ ವೈ.ಎಸ್.ಮಿರಜಿ, ಎಂ.ಎ.ಪಾಟೀಲ, ಎ.ಪಿ.ದಾನವಾಡೆ, ಎಂ.ಜಿ.ಲಡಗೆ, ಐ.ಎನ್.ಹಂಪಣ್ಣವರ, ಎಂ.ಜಿ.ಭಾತೆ, ಆರ್.ವೈ.ರೋಖಡೆ, ಜಿ.ಎ.ಸಾಂಗಲೆ, ಎಸ್.ಆರ್.ಪಾಟೀಲ, ಎಂ.ಎಸ್.ದೇಸಾಯಿ, ಎ.ಸಿ.ಬಸರಗಿ, ಎಂ.ವೈ.ಮಿರಜಿ, ಪ್ರಭಾರ ಶಾಖಾ ವ್ಯವಸ್ಥಾಪಕ ಬಿ.ಬಿ.ಉಮರಾಣಿ, ಆಡಳಿತ ಸಲಹೆಗಾರ ಕೆ.ಎಸ್.ಕುಂಬಾರ, ಸಿ.ಎ. ಎ.ಆರ್.ಅಕ್ಕೋಳಿ, ಗಣ್ಯರಾದ ಜಿನ್ನಪ್ಪ ಅಸ್ಕಿ, ಶಾಂತಿನಾಥ ಅಸ್ಕಿ, ಆರ್.ಬಿ.ಖೇಮಲಾಪೂರೆ, ಎಸ್.ಡಿ.ಶಿರಗುಪ್ಪಿ, ಉದಯ ಮಾನೆ, ಬಿ.ಡಿ.ಪಾಟೀಲ, ಬಿ.ಬಿ.ಕರ್ಣವಾಡಿ, ಅಶೋಕ ಅಸ್ಕಿ, ಕಲಗೌಡ ಪಾಟೀಲ, ಧನಪಾಲ ಶಿರಹಟ್ಟಿ, ಭಗವಂತ ಬಾಬಣ್ಣವರ, ಅನೀತಾ ಕುರುಂದವಾಡೆ, ದೀಪಾ ಕುರುಂದವಾಡೆ, ಕಾಂಚನ ಉಮರಾಣಿ, ಕರೆಪ್ಪ ಹುಲಿಮನಿ, ವಿ.ಬಿ.ದೇಸಾಯಿ, ಸಿ.ಎ.ತೆವರಟ್ಟಿ, ಬಿ.ಜಿ.ಗುಂಡಾಳೆ, ಪ್ರವೀಣ ಕಟಕೋಳ, ಸಾಗರ ಪವಾರ ಹಾಗೂ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಬ್ಯಾಂಕಿನ ಪ್ರಭಾರ ಪ್ರಧಾನ ವ್ಯವಸ್ಥಾಪಕ ಆರ್.ಎಸ್.ವಂದೂರೆ ಕಾರ್ಯಕ್ರಮ ನಿರೂಪಿಸಿದರು.