ಕಂಪ್ಲಿ

ಸಾವಿತ್ರಿ ಬಾಯಿಪುಲೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಶಾಂತಾ ಘಡ್ಡದ ಆಯ್ಕೆ

ಸಾವಿತ್ರಿ ಬಾಯಿಪುಲೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಶಾಂತಾ ಘಡ್ಡದ ಆಯ್ಕೆ

ಕಂಪ್ಲಿ 02:  ದಕ್ಷಿಣ ಭಾರತದ ಸಾವಿತ್ರಿ ಬಾಯಿ ಪುಲೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಕಂಪ್ಲಿಯ ಶಾಂತಾ ಘಡ್ಡದ ಭಾಜನರಾಗಿದ್ದಾರೆ. ಆಂದ್ರ ಪ್ರದೇಶದ ಗುರುಚೈತನ್ಯ ಉಪಾಧ್ಯಯ ಸಂಘವು ಸಾವಿತ್ರ ಬಾಯಿಪುಲೆ ಜನ್ಮದಿನದ ಪ್ರಯುಕ್ತ ಪ್ರತಿ ವರ್ಷ ನೀಡುವ ಸಾವಿತ್ರಿ ಬಾಯಿಪುಲೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಕಂಪ್ಲಿ ತಾಲೂಕಿನ ಸಣಾಪುರ ಗ್ರಾಪಂ ವ್ಯಾಪ್ತಿಯ ಅರಳಳ್ಳಿತಾಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶಾಂತಾ ಘಡ್ಡದ ಇವರಿಗೆ ಒಲಿದು ಬಂದಿದೆ. ಸಂಘವು ದೇಶದ 12 ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಸೇವೆ ಸಲ್ಲಿಸಿದ ಶಿಕ್ಷಕರನ್ನು ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡುತ್ತಿದೆ. 12 ರಾಜ್ಯಗಳ ಪೈಕಿ ಕರ್ನಾಟಕದಿಂದ ಕಠಿಣ ಪರಿಶ್ರಮ, ಶಿಕ್ಷಣಕ್ಕೆ ನೀಡಿದ ಕೊಡುಗೆ ಹಾಗೂ ಇವರ ಸೇವೆಯನ್ನು ಗುರುತಿಸಿ, ಕಂಪ್ಲಿಯ ಸಹ ಶಿಕ್ಷಕಿ ಶಾಂತಾ ಇವರನ್ನು ಆಯ್ಕೆ ಮಾಡಿರುವುದು ಹರ್ಷದಾಯಕವಾಗಿದೆ. ಜ.03ರಂದು ವಿಜಯವಾಡದಲ್ಲಿ ತುಮ್ಮಲಪಲ್ಲಿ ಕಲಾಕ್ಷೇತ್ರದಲ್ಲಿ ನಡೆಯುವ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕಾರ ಸ್ವೀಕರಿಸಲಿದ್ದಾರೆ. ಈ ಹಿಂದೆ ಕರ್ನಾಟಕ ರಾಜ್ಯಪಾಲರಿಂದ ಚಿನ್ನದ ಪದಕ ಪಡೆದಿರುವುದು ಅವಿಸ್ಮರಣೀಯವಾಗಿದೆ.  


ಸುದ್ದಿ ಓದಿ