ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಷಣ್ಮುಖಪ್ಪ ನೇಮಕ
ಶಿಗ್ಗಾವಿ 09: ಡಾ.ಬಾಬು ಜಗಜೀವನರಾಮ್ ಆದಿ ಜಾಂಬವ ಯುವ ಬ್ರಿಗೇಡ್ನ ಜಿಲ್ಲಾ ಘಟಕ ಹಾವೇರಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆದಿಜಾಂಬವ ಜನಾಂಗದ ಜಿಲ್ಲಾ ಯುವ ಮುಖಂಡ ಷಣ್ಮುಖಪ್ಪ ಕಂಟೆಪ್ಪನವರ ನೇಮಕಗೊಂಡಿದ್ದಾರೆ.
ರಾಜ್ಯಧ್ಯಕ್ಷ ಏಳುಕೋಟೆಪ್ಪ ಎಸ್.ಪಾಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೊ. ರಾಜಣ್ಣ ಎಮ್. ಇವರ ಮಾರ್ಗದರ್ಶನದಲ್ಲಿ ಹಾವೇರಿ ಜಿಲ್ಲಾಧ್ಯಕ್ಷ ಮರಿಯಪ್ಪ ಮಾಳಗಿ ಅವರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಷಣ್ಮುಖಪ್ಪ ಕಂಟೆಪ್ಪನವರ ಇವರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.