ಈಶ್ವರನ ಪಾತ್ರದಲ್ಲಿ ಶಂಕರ ಅರ್ಕಸಾಲಿ
ಶಿಗ್ಗಾವಿ 13: ಮಹಾಶಿವರಾತ್ರಿ ನಿಮಿತ್ಯ ಪಟ್ಟಣದ ನೇಪತ್ಯ ಕಲಾವಿದ ಹಾಗೂ ಜಾನಪದ ಅಕಾಡೆಮಿ ಸದಸ್ಯ ಶಂಕರ ಅರ್ಕಸಾಲಿಯವರು ಈಶ್ವರನ ಪಾತ್ರದಲ್ಲಿ ರೂಪಕ ಮಾಡಿ ಸಾಕ್ಷಾತ್ತ ಈಶ್ವರನೇ ಬಂದು ಕುಳಿತಿದ್ದಾನೆ ಎನ್ನುವ ಆಶ್ಚರ್ಯ ಪಟ್ಟಣದ ಜನತೆಗೆ ವ್ಯಕ್ತವಾಯಿತು.ಯಾವಾಗಲೂ ಅವರು ಬೇರೆಯವರಿಗೆ ತಯಾರಿ ಮಾಡುತ್ತಿದ್ದರು ಇಂದು ಅವರ ಈ ಈಶ್ವರನ ಪಾತ್ರದಲ್ಲಿರುವುದನ್ನು ನೋಡಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೋಟ್ರೇಶ ಮಾಸ್ತರ ಬೆಳಗಲಿ, ವಚನ ನಿಧಿ ವನಿತಾ ಸಂಘದ ಅಧ್ಯಕ್ಷೆ ಡಾ. ಲತಾ ನಿಡಗುಂದಿ, ಪುಟ್ಟರಾಜ ಕವಿ ಗವಾಯಿಗಳ ಸಂಘ ಅಧ್ಯಕ್ಷ ಪಕ್ಕಿರೇಶ ಕೊಂಡಾಯಿ, ಜಾನಪದ ತಜ್ಞ ಬಸವರಾಜ ಶಿಗ್ಗಾವಿ, ರಾಜ ಹರ್ಷ ಸೊಲಭಕ್ಕನವರ, ಜಾನಪದ ಸಹ ಪ್ರಾದ್ಯಾಫಕ ಶರೀಫ ಮಾಕಪ್ಪನವರ, ರಮೇಶ ಸಾತಣ್ಣವರ, ವಿರುಪಾಕ್ಷಪ್ಪ ಬಗಾಡೆ, ನಾಗರಾಜ ಶಿಂದೆ, ಶೇಖಪ್ಪ ಜೋಳದ, ನಾಗರಾಜ ಹೊಸಮನಿ ಸೇರಿದಂತೆ ತಾಲೂಕಿನ ಸಂಘ ಸಂಸ್ಥೆಯ ಪದಾಧಿಕಾರಿಗಳು ಇದರ ಮುಖಾಂತರ ಇವರ ಕಲೆಯ ಮಹತ್ವ ಗೊತ್ತಾಗುತ್ತದೆ ಎಂದು ಪ್ರಶಂಸಿಸಿದರು ಅಲ್ಲದೇ ಬರುವ ದಿನಮಾನಗಳಲ್ಲಿ ಒಳ್ಳೆಯ ಹೆಸರನ್ನು ತರುತ್ತಾರೆ ಎಂದು ಶ್ಲಾಘಿಸಿದರು.