ಮುದ್ದೆಬಿಹಾಲ್

ಬನಶಂಕರಿ ಪತ್ತಿನ ಸಂಘದ ಅಧ್ಯಕ್ಷರಾಗಿ ಶಂಕರ ಹೆಬ್ಬಾಳ ಅವಿರೋಧ ಆಯ್ಕೆ

ಬನಶಂಕರಿ ಪತ್ತಿನ ಸಂಘದ ಅಧ್ಯಕ್ಷರಾಗಿ ಶಂಕರ ಹೆಬ್ಬಾಳ ಅವಿರೋಧ ಆಯ್ಕೆ

ಮುದ್ದೇಬಿಹಾಳ 03: ಪಟ್ಟಣದ ಬನಶಂಕರಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಶಂಕರ ಈ.ಹೆಬ್ಬಾಳ ಅವಿರೋಧವಾಗಿ ಆಯ್ಕೆಯಾದರು.    

ಇಲ್ಲಿನ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ತುರ್ತು ಸಭೆಯಲ್ಲಿ ಸರ್ವ ಸದಸ್ಯರು ಈ ಆಯ್ಕೆಗೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು. ಸಂಘದ ಈ ಹಿಂದಿನ ಅಧ್ಯಕ್ಷರಾಗಿದ್ದ ಬಸಪ್ಪ ಹೆಬ್ಬಾಳ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ  ನಿರ್ದೇಶಕ ಶಂಕರ ಹೆಬ್ಬಾಳ ಅವರನ್ನು ಅಧ್ಯಕ್ಷರಾಗಿ ಸರ್ವ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ ಎಂದು ಸಂಘದ ಪ್ರಧಾನ ವ್ಯವಸ್ಥಾಪಕರಾದ ವಿಜಯಲಕ್ಷ್ಮೀ ಪ್ಯಾಟಿಗೌಡರ ತಿಳಿಸಿದರು. 

ಬಸಪ್ಪ ಹೆಬ್ಬಾಳ ಅವರ ನಿಧನದಿಂದ ತೆರವಾದ ನಿರ್ದೇಶಕ ಸ್ಥಾನಕ್ಕೆ ಅವರ ಪುತ್ರ ಚಂದ್ರಕಾಂತ ಹೆಬ್ಬಾಳ ಅವರನ್ನು ಆಯ್ಕೆ ಮಾಡಲಾಯಿತು. ಸಂಘದ ಉಪಾಧ್ಯಕ್ಷ ರಮೇಶ ಹೆಬ್ಬಾಳ, ನಿರ್ದೇಶಕರಾದ ಸಂಗಪ್ಪ ಕಲ್ಲುಂಡಿ, ಸುಭಾಷ ರುದ್ರಗಂಟಿ, ಉಮೇಶ ಪ್ಯಾಟಿಗೌಡರ, ದ್ಯಾವಪ್ಪ ಹುಣಶ್ಯಾಳ, ಬಸಪ್ಪ ಹುಣಶ್ಯಾಳ, ಬಸವರಾಜ ಅಗಸಬಾಳ, ಶಂಕ್ರಮ್ಮ ಪ್ಯಾಟಿಗೌಡರ, ಜಯಶ್ರೀ ಹೆಬ್ಬಾಳ, ಚಂದ್ರಕಾಂತ ಹೆಬ್ಬಾಳ ಇದ್ದರು.ಪ್ರಧಾನ ವ್ಯವಸ್ಥಾಪಕ ವಿಜಯಲಕ್ಷ್ಮೀ ಪ್ಯಾಟಿಗೌಡರ ನಿರೂಪಿಸಿ ವಂದಿಸಿದರು. ಅಗಲಿದ ಹಿಂದಿನ ಅಧ್ಯಕ್ಷ ಬಸಪ್ಪ ಹೆಬ್ಬಾಳ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು. 


ಸುದ್ದಿ ಓದಿ