ಶಿಗ್ಗಾವ್

ಶಕುಂತಲಾ ಕೋಣನವರವರ ಚಿತ್ತದೊಳಗಿನ ಚಿತ್ತಾರ ಕವನ ಸಂಕಲನ ಲೋಕಾರ್ಪಣೆ

ಶಕುಂತಲಾ ಕೋಣನವರವರ ಚಿತ್ತದೊಳಗಿನ ಚಿತ್ತಾರ  ಕವನ ಸಂಕಲನ ಲೋಕಾರ್ಪಣೆ

ಶಿಗ್ಗಾವಿ 20: ಪಟ್ಟಣದ ಹನುಮಂತಗೌಡ್ರ ಕಲ್ಯಾಣ ಮಂಟಪದಲ್ಲಿ ಕವಯಿತ್ರಿ ಶಕುಂತಲಾ ಕೋಣನವರ ಅವರ  ಚಿತ್ತದೊಳಗಿನ ಚಿತ್ತಾರ  ಎಂಬ ಕವನ ಸಂಕಲನವನ್ನು ದಿ. 21 ರಂದು ರವಿವಾರ ಶಿಗ್ಗಾವಿ ವಿರಕ್ತಮಠದ ಸಂಗನಬಸವ ಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಸತೀಶ ಕುಲಕರ್ಣಿ ಲೋಕಾರೆ​‍್ಣಗೊಳಿಸಲಿದ್ದಾರೆ. 

ಹಾನಗಲ್ಲಿನ ದೀಪಾ ಗೋನಾಳ ಪುಸ್ತಕದ ಕುರಿತು ಮಾತನಾಡಲಿದ್ದಾರೆ ಪ್ರಾಚಾರ್ಯ ಡಾ. ನಾಗರಾಜ ದ್ಯಾಮನಕೊಪ್ಪ ಅಧ್ಯಕ್ಷತೆ ವಹಿಸುವರು, ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಬ ಫಯಲಿಗಾರ, ಸ್ತ್ರೀ ಸ್ವಹಾಯ ಸಂಘಟನೆಯ ಅಧ್ಯಕ್ಷೆ ಸುಶೀಲಕ್ಕ ಪಾಟೀಲ, ವಚನನಿಧಿ ವನಿತಾ ಸಂಘದ ಅಧ್ಯಕ್ಷೆ ಡಾ. ಲತಾ ನಿಡಗುಂದಿ, ರಾಣೇಬೆನ್ನೂರಿನ ಸಾಹಿತಿದೇವರಾಜ ಹುಣಶಿಕಟ್ಟಿ ಮುಂತಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಇದೇ ಸಂದರ್ಭದಲ್ಲಿ ನಡೆಯಲಿರುವ  ಕವಿತಾ ವಾಚನದಲ್ಲಿ ಸ್ನೇಹಾಕೋರಿ, ಡಾ. ಸುಮಂಗಲ ಅತ್ತಿಗೇರಿ, ಪ್ರತಿಭಾಗಾಂಜಿ, ಎಸ್ ವಿ ಕುಲಕರ್ಣಿ, ನಾಗಪ್ಪ ಬೆಂತೂರ, ಶಿವಶಂಕರ ಅಕ್ಕಿ, ಜಿ ಎಂ ಅರಗೋಳ, ಎಂ ಎ ಗಾಣಿಗೇರ, ಅನಿಲ ನಾಯ್ಕರ್, ಉಷಾ ಕೆ ಪಾಟೀಲ ಮಹಾದೇವ ರಾಯಚೂರ ಹಾಗೂ ಅನ್ನಪೂರ್ಣ ಪಾಟೀಲ ಮುಂತಾದವರು ಭಾಗವಹಿಸಲಿದ್ದಾರೆ ಹಿರಿಯ ನ್ಯಾಯವಾದಿ ಎಫ್‌ಎಸ್‌ಕೋಣನವರ ಈ ಪುಸ್ತಕವನ್ನು ತನ್ಮ ಅನುಪಮ ಪ್ರಕಾಶನದಿಂದ ಪ್ರಕಟಿಸಿದ್ದಾರೆ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಧೀರಜ್ ಕೋಣನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ