ಶಕ್ತಿ ಯೋಜನೆ ಬಸ್ಸಿಗಾಗಿ ತುಂಬಿತುಳುಕುತ್ತಿರುವ ಮಹಿಳೆಯರು
ಸಂತೋಷಕುಮಾರ ಕಾಮತ್
ಮಾಂಜರಿ: ರಾಜ್ಯ ಸರಕಾರದ ಶಕ್ತಿ ಯೋಜನೆಯಡಿ ನಿಲ್ದಾಣಗಳಲ್ಲಿ ಕಲ್ಪಿಸಿದ್ದರಿಂದ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವಿದ್ಯಾರ್ಥಿಗಳಿಗೆ ಹಾಗೂ ಪುರುಷರು ತೊಂದರೆ ಅನುಭವಿಸುತ್ತಿದ್ದಾರೆ.
ಸಕರ್ಾರದ ಶಕ್ತಿಯೋಜನ ಜಾರಿಯಾದಾಗಿನಿಂದ ಶೇ.45ರ ಮಹಿಳಾ ಹೆಚ್ಚಾಗಿದ್ದಾರೆ. ಬಸ್ ನಲ್ಲಿ ಹೊಂದಿಕೊಂಡು ಮಾಡಬೇಕಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ಹೋಗಿ ಬರಲು ಮತ್ತು ಪುರುಷರಿಗೆ ಪ್ರಯಾಣಿಸಲು ಸಂಖ್ಯೆ ಗಣನೀಯ ಹೆಚ್ಚಳ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೆ ಪ್ರಯಾಣ ಮಾಡುತ್ತಿದ್ದು ಜೂ. 12ರಂದು ಜಾರಿಯ ದಿನದಂದು 96,253 ಮಹಿಳಾ ಪ್ರಯಾಣಿಕರು, 13ರಂದು 1,21,532, .ಜೂನ್ 14 ರಂದು 1,30,951 ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ.
ಮಹಿಳೆಯರು ಅವಶ್ಯಕತೆಗೆ ಅನುಗುಣವಾಗಿ ಪ್ರಮಾಣ ಮಾಡಿ: ಸಾರಿಗೆ ಬಸ್ಗಳು ಸಂಖ್ಯೆ ಕಡಿಮೆ ಇರುವುದರಿಂದ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಹಿಳೆಯರು ಉಚಿತ ಪ್ರಯಾಣವನ್ನುಅವಶ್ಯಕತೆಗೆ ಅನುಗುಣವಾಗಿ ಮಾಡಿದರೆ ಹೆಚ್ಚಿನ ಅನುಕೂಲವಾಗುತ್ತದೆ. ಇಲ್ಲದಿದ್ದರೆ ನಿತ್ಯವುಪ್ರಯಾಣ ಕಷ್ಟಕರವಾಗಬಹುದು ಎಂದು ನೊಂದ ಪುರುಷ ಪ್ರಯಾಣಿಕರ ಅಭಿಪ್ರಾಯವಾಗಿದೆ.
**ಸರ್ಕಾರ ನುಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ಬಸ್ನಲ್ಲಿ ಈಗ ಮುರುಗರಿಗೆ ಸ್ಥಳವಿಲ್ಲದಂತಾಗಿದೆ. ಹೆಚ್ಚಿನ ಸಂಖ್ಯೆ ಯಲ್ಲಿ ಬಸ್ಗಳನ್ನು ಓಡಿಸಿದರೆ ಇನ್ನಷ್ಟು ಅನುಕೂಲವಾಗಬಹುದು. ಈ ಹಿಂದೆ ಜಾತ್ರೆ ಹಾಗೂ ವಿಶೇಷ ಹಬ್ಬ ಹರಿದಿನಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಇಂತಹ ಜನಸಂದಣಿ ನೋಡುತ್ತಿದ್ದೆವು ಈಗ ಪ್ರತಿದಿನ ನೋಡುವಂತಾಗಿದೆ.
- ಶ್ರೀಪತಿ ಪೂಜಾರಿ ಪ್ರಯಾಣಿಕರು
**ಚಿಕ್ಕೋಡಿ ಜಿಲ್ಲೆಯಲ್ಲಿ ಪ್ರತಿದಿನ 1499 ಬಸ್ಗಳು ಸಂಚಾರ ಮಾಡುತ್ತವೆ. ಬಸ್ ನಿಲ್ದಾಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ದಿನವೊಂದಕ್ಕೆ 10 ಲಕ್ಷ ರೂ. ಗುರಿ ಮುಟ್ಟುತ್ತಿರಲಿಲ್ಲ ಆದರೆ, ಈಗ 16 ಲಕ್ಷರೂ. ಗುರಿ ಮುಟ್ಟುತ್ತಿದ್ದೇವೆ. ಹೆಚ್ಚುವರಿ ವಾಹನಗಳನ್ನು ಬಿಡಲು ನಮ್ಮಲ್ಲಿ ಬಸ್ಗಳಿಲ್ಲ.
-ವೇಣುಗೋಪಾಲ
ವಿಭಾಗಿಯ ನಿಯಂತ್ರಣಾಧಿಕಾರಿ ಚಿಕ್ಕೋಡಿ