ಕಂಪ್ಲಿ

ಕಂಪ್ಲಿಯಲ್ಲಿ ಕನ್ನಿಕಾಪರಮೇಶ್ವರಿಗೆ ಶಾಖಾಂಬರಿ ಅಲಂಕಾರ ಮತ್ತು ವಿಶೇಷ ಪೂಜೆ

ಕಂಪ್ಲಿಯಲ್ಲಿ ಕನ್ನಿಕಾಪರಮೇಶ್ವರಿಗೆ ಶಾಖಾಂಬರಿ ಅಲಂಕಾರ ಮತ್ತು ವಿಶೇಷ ಪೂಜೆ

ಲೋಕದರ್ಶನ ವರದಿ 

ಕಂಪ್ಲಿ  08: ಆಷಾಡ ಕೊನೆ ಶುಕ್ರವಾರದ ಪ್ರಯುಕ್ತ ಕಂಪ್ಲಿ ಪಟ್ಟಣದಲ್ಲಿ ಆರ್ಯ ವೈಶ್ಯ ಸಮಾಜದವರು ತಮ್ಮ ಆರಾಧ್ಯ ದೇವತೆಯಾದ ಶ್ರೀ ಕನ್ನಿಕಾಮರಮೇಶ್ವರಿ, ನಗರೇಶ್ವರ ಮತ್ತು ಪಾರ್ವತಿ ದೇವರುಗಳಿಗೆ ಶಾಖಾಂಬರಿ ಅಲಂಕಾರ ಮಾಡಿ ಪೂಜಿಸಿದರು. 

ಆಷಾಡ ಮಾಸದ ಕೊನೆ ಶುಕ್ರವಾರದ ಅಂಗವಾಗಿ ಪಟ್ಟಣದ ಆರ್ಯವೈಶ್ಯ ಸಮಾಜದವರು ತಮ್ಮ ಆರಾಧ್ಯ ದೇವರುಗಳಾದ ಕನ್ನಿಕಾಪರಮೇಶ್ವರಿ,ನಗರೇಶ್ವರ ಹಾಗೂ ಪಾರ್ವತಿ ದೇವರುಗಳಿಗೆ ವಿವಿಧ ಅಭಿಷೇಕಗಳನ್ನು ನೆರವೇರಿಸಿದ ನಂತರ ವಿವಿಧ ತರಕಾರಿಗಳಾದ ಗೆಜ್ಜರಿ,ಹಸಿಮೆಣಸಿನಕಾಯಿ, ದೊಣ್ಣೆ ಮೆಣಸಿನಕಾಯಿ, ಸೌತೇಕಾಯಿ, ಎಲೆಕೊಸಯ, ಬದನೆಕಾಯಿ,ಕುಂಬಳಕಾಯಿ, ಬೆಂಡೆಕಾಯಿ ಸೇರಿದಂತೆ ವಿವಿಧ ತರಕಾರಿಗಳು, ವೈವಿದ್ಯಮಯ ಹೂಗಳು,ಹೊಸ ವಸ್ತ್ರಗಳಿಂದ ಅಲಂಕರಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದರು. 

ಆರ್ಯವೈಶ್ಯ ಸಮಾಜದ ಮಹಿಳೆಯರು ಲಲಿತ ಸಹಸ್ರನಾಮ,ಲಕ್ಷ್ಮಿ ಅಷ್ಟೋತ್ತರ ಸೇರಿದಂತೆ ಭಕ್ತಿಯ ಹಾಡುಗಳನ್ನು ಪ್ರಸ್ತುತ ಪಡಿಸಿದರು. ಕೊನೆಯಲ್ಲಿ ಮಹಾಮಂಗಳಾರತಿಯ ನಂತರ ತೀರ್ಥ ಪ್ರಸಾದ ವಿತರಣೆ ಜರುಗಿತು. ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಸಮಾಜದ ವಿವಿಧ ಸಂಘಗಳ ಪದಾಧಿಕಾರಿಗಳು, ಹಿರಿಯರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು. 


ಸುದ್ದಿ ಓದಿ