ಇಂಡಿ

ರಸ್ತೆಯಲ್ಲಿ ಚರಂಡಿ ನೀರು ಸಂಗ್ರಹ: ವಾಹನಸವಾರರು ಗುಂಡಿಗಳನ್ನು ತಪ್ಪಿಸಲು ಹರಸಾಹಸ

ರಸ್ತೆಯಲ್ಲಿ ಚರಂಡಿ ನೀರು ಸಂಗ್ರಹ: ವಾಹನಸವಾರರು ಗುಂಡಿಗಳನ್ನು ತಪ್ಪಿಸಲು ಹರಸಾಹಸ

ಇಂಡಿ: ಪಟ್ಟಣದಿಂದ ಅಗರಖೇಡ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ಅದರಲ್ಲಿ ಮೊಳಕಾಲುವರೆಗೆ ಚರಂಡಿ ನೀರು ಸಂಗ್ರಹವಾಗಿದ್ದು ವಾಹನ ಸವಾರರು  ಎಷ್ಟೋಬಾರಿ ಕೈಕಾಲು ಮುರಿದುಕೊಂಡ ಘಟನೆಗಳು ನಡೆದಿದೆ. 

ಕಳೆದ ಎರಡು ತಿಂಗಳಿಂದ ತಗ್ಗಿನಲ್ಲಿ ನೀರು ಸಂಗ್ರಹವಾಗುತ್ತಿದೆ ಸಂಬಂಧಿಸಿದ ಅಧಕಾರಿಗಳು ಇದುವರೆಗೂ ಗಮನಹರಿಸದಿರುವುದು ವಿಪರ್ಯಾಸವೇ ಸರಿ. ಅಗರಖೇಡ ರಸ್ತೆ ಪಟ್ಟಣದಿಂದ ಒಂದು ಕಿ.ಮೀ.ವರೆಗೆ ಪುರಸಭೆ ವ್ಯಾಪ್ತಿಯಲ್ಲಿ ಬರುವುದರಿಂದ ಪುರಸಭೆಯವರು ದುರಸ್ತಿ ಮಾಡಬೇಕು. ಇಲ್ಲವದರೆ ರಾಷ್ಟ್ರೀಯ ಹೆದ್ದಾರೆ ಪ್ರಾಧಿಕಾರದವರು ದುರಸ್ತಿ ಮಾಡಬೇಕು ಎಂಬುದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಾದ. 

ಆ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದರು ಸಂಬಂಧಿಸಿದ ಅಧಿಕಾರಿಗಳು ಮಾತ್ರ ರಸ್ತೆ ದುರಸ್ತೆಗೆ ಮುಂದಾಗುತ್ತಿಲ್ಲ. ಈಗಾಗಲೇ ಹತ್ತಾರು ವಾಹನಗಳು ಗುಂಡಿಯಲ್ಲಿ ಬಿದ್ದು ಕೈ-ಕಾಲು ಕೆತ್ತಿಕೊಂಡ ಉದಾಹರಣೆಗಳು ಬಹಳಷ್ಟಿವೆ. 

ಇನ್ನೂ ಕೆಲವು ದಿನ ಬಿಟ್ಟರೆ ಬಹುತೇಕ ಪ್ರಯಾಣಿಕರು ಅಥವಾ ವಾಹನ ಸವಾರರು ಆ ಗುಂಡಿಗಳಲಿ ಬಿದ್ದು ಪ್ರಾಣ ಕಳೆದುಕೊಳ್ಳುವ ಭೀತಿ ಎದುರಾಗಿದೆ. ರಾತ್ರಿ ಹೊತ್ತಿನಲ್ಲಿ ಸರಿಯಾಗಿ ರಸ್ತೆ ಕಾಣಲ್ಲ. ಅಲ್ಲದೆ ಆ ರಸ್ತೆಗೆ ಹೊಸದಾಗಿ ಯಾರಾದರೂ ವಾಹನ ಸವಾರರು ಬಂದರೆ ಗುಂಡಿಗಳ ಆಳ ತಿಳಿಯದೇ ಗುಂಡಿಯಲ್ಲಿ ಬೀಳಬಹುದಾಗಿದೆೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಗುಂಡಿಯನ್ನು ಮುಚ್ಚಿ ಅನಾಹುತವನ್ನು ತಪ್ಪಿಸಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಆಗ್ರವಾಗಿದೆ. 

ಬಹಳ ದಿನಗಳಿಂದ ನೀರು ಸಂಗ್ರಹವಾಗಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಾಗಿದೆ. ರಸ್ತೆಯ ಪಕ್ಕದಲ್ಲಿ ಚರಂಡಿ ನೀರು ಹೋಗಲು ಚರಂಡಿ ತೆಗೆಯಬೇಕು. ಮತ್ತು ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ ವಾಹನ ಸವಾರರು ಮತ್ತು ಪ್ರಯಾಣಿಕರಿಗೆ ಅನವು ಮಾಡಿಕೊಡಬೇಕೆಂಬುದು ನಾಗರಿಕರ ಆಗ್ರವಾಗಿದೆ. 


ಬಾಕ್ಸ-1: 

ರಸ್ತೆಯಲ್ಲಿ ಚರಂಡಿ ನೀರು ಸಂಗ್ರಹವಾಗಿ ಗಬ್ಬು ವಾಸನೆ ಹರಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಈಗಾಗಲೆ ಪುರಸಭೆಯವರಿಗೆ ರಸ್ತೆ ಅಥವಾ ದುರಸ್ಥಿ ಮಾಡುವಂತೆ ಪತ್ರ ಬರೆದಿದ್ದೇವೆ. ನಾಳೆ ಖುದ್ದಾಗಿ ಸ್ಥಳಕ್ಕೆ ಭೇಟಿಯಾಗಿ ಸಮಸ್ಯೆ ಬಗೆಹರಿಸುತ್ತೇನೆ. 

ವಿವೇಕ ಮಠ. ರಾಷ್ಟ್ರೀಯ ಹೆದ್ದಾರೆ ಪ್ರಾಧಿಕಾರ ಸಹಾಯಕ ಅಭಿಯಂತರು. 


ಸುದ್ದಿ ಓದಿ