3 ವಾಹನಗಳ ನಡುವೆ ಸರಣಿ ಅಪಘಾತ : ಇಬ್ಬರು ಸಾವು, ಮೂವರಿಗೆ ಗಂಭೀರ ಗಾಯ

3 ವಾಹನಗಳ ನಡುವೆ ಸರಣಿ ಅಪಘಾತ : ಇಬ್ಬರು ಸಾವು, ಮೂವರಿಗೆ ಗಂಭೀರ ಗಾಯ

ಬೆಳಗಾವಿ : ಕಾರು ಹಾಗೂ ಬುಲೇರೊ ಗುಡ್ಸ್ ವಾಹನ ಹಾಗೂ ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಸರಣಿ ಅಪಘಾತ ದಲ್ಲಿ ಒಟ್ಟು ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದ ಜತ್ ಜಾಂಬೋಟಿ ರಾಜ್ಯ ಹೆದ್ದಾರಿ  ಮೇಲೆ ಮಂಗಳವಾರ ಸಂಜೆ ನಡೆದಿದೆ.

  ಈ ಘಟನೆಯಲ್ಲಿ ಕಾರಿನ ಚಾಲಕ ರಾಮಪ್ಪ ಪವಾಡಿ ಮಾಂಗ (ಸಾ: ದೇವಾಪೂರಹಳ್ಳಿ ತಾ|| ರಾಯಬಾಗ) ಹಾಗೂ ಶಿವಬಸು ಗಣಪತಿ ಚೌಗಲಾ (65), (ಸಾ|| ಕಂಕಣವಾಡಿ, ಪ್ರಯಾಣಿಕ) ಇವರಿಬ್ಬರು ಮೃತಪಟ್ಟವರಾಗಿದ್ದಾರೆ.

     ದಿ. 21ರಂದು ಮಧಾಹ್ನ 3.30 ಗಂಟೆಗೆ  ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದ ಹದ್ದಿ ಜತ್ ಜಾಂಬೋಟಿ ರಾಜ್ಯ ಹೆದ್ದಾರಿ ಸಂಖ್ಯೆ: 31 ಮೇಲೆ ಮಾರುತಿ ಸುಝುಕಿ ಸ್ವಿಫ್ಟ್ ಡಿಸೈರ್  ನಂ. ಕೆಎ 18 ಸಿ 4252 ನೇದ್ದರ ಚಾಲಕ ಗೋಕಾಕ ಕಡೆಯಿಂದ ಮೂಡಲಗಿ ಕಡೆಗೆ ಮತ್ತು ಬುಲೆರೋ ಪಿಕ ಅಪ್ ವಾಹನ ನಂ. ಕೆಎ 26 ಬಿ 4417 ನೇದ್ದರ ಚಾಲಕ ಮೂಡಲಗಿ ಕಡೆಯಿಂದ ಗೋಕಾಕ ಕಡೆಗೆ ಸಾಗುತ್ತಿದ್ದಾಗ ಪರಸ್ಪರ ಡಿಕ್ಕಿ ಸಂಭವಿಸಿದೆ. 

    ಇದೇ ವೇಳೆ ರಸ್ತೆಯ ಬದಿಯಲ್ಲಿ ನಿಂತಿದ್ದ ಹೊಂಡಾ ಶೈನ್ ಮೋಟರ ಸೈಕಲ್ ನಂ. ಕೆಎ 37 ಇಕೆ 9340 ನೇದ್ದಕ್ಕೂ ಸಹ ಅಪಘಾತ ಪಡಿಸಿಸಲಾಗಿದೆ. ಕಾರಗಾಡಿಯಲ್ಲಿನ ಇನ್ನುಆದ ಇಬ್ಬರು ಪ್ರಯಾಣಿಕರು ಭಾರೀ ಗಾಯ ಹೊಂದಿರುತ್ತಾರೆ. ಕಾರಿನಲ್ಲಿದ್ದ ಪ್ರಯಾಣಿಕರು ಹಾಗೂ ಮೋಟರ ಸೈಕಲ್ ಮೇಲೆ ನಿಂತಿದ್ದ ಸವಾರ ಗೋಕಾಕ ಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ.

   ಬುಲೆರೋ ವಾಹನ ಚಾಲಕ ಮತ್ತು ಒಬ್ಬ ಪ್ರಯಾಣಿಕನಿಗೆ ಸಾದಾ ಗಾಯಗಳಾಗಿರುತ್ತದೆ. ಅಪಘಾತದ ಬಗ್ಗೆ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಡಿವೈಎಸ್‌ಪಿ ಗೋಕಾಕ, ಸಿಪಿಐ ಮೂಡಲಗಿ ವೃತ್ತ ಮತ್ತು ಪಿ.ಎಸ್.ಐ. ಮೂಡಲಗಿ ಇವರುಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಕೊಂಡಿದ್ದಾರೆ.

ಸುದ್ದಿ ಓದಿ