ಚಿಕ್ಕೋಡಿ

ನಿಸ್ವಾರ್ಥ ಸೇವೆ ಭಗವಂತನಿಗೆ ಮುಟ್ಟುತ್ತದೆ: ಪ್ರೊ.ಪ್ರಶಾಂತ ಪವಾರ

ನಿಸ್ವಾರ್ಥ ಸೇವೆ ಭಗವಂತನಿಗೆ ಮುಟ್ಟುತ್ತದೆ: ಪ್ರೊ.ಪ್ರಶಾಂತ ಪವಾರ

ಮಾಂಜರಿ 27: ಸೇವೆ ಎಂಬ ಪದಕ್ಕೆ ಅತ್ಯಂತ ವ್ಯಾಪಕ ಅರ್ಥವಿದೆ. ಸೇವೆ ಮಹತ್ತರವಾದ ಒಂದು ಮಾನವೀಯ ಮೌಲ್ಯವಾಗಿದ್ದು, ನಾವು ನಿಸ್ವಾರ್ಥದಿಂದ ಮಾಡುವ ಸೇವೆ ನಿಜಕ್ಕೂ ಆ ಭಗವಂತನಿಗೆ ಮುಟ್ಟುತ್ತದೆ ಎಂದು ಕೆಎಲ್‌ಇ ಸಂಸ್ಥೆಯ ಮಲಗೌಡ ಪಾಟೀಲ ಪದವಿ ಕಾಲೇಜು ರಾಯಬಾಗದ ಕನ್ನಡ ಅಧ್ಯಾಪಕ ಪ್ರೊ.ಪ್ರಶಾಂತ.ಪಿ.ಪವಾರ ಅಭಿಮತ ವ್ಯಕ್ತಪಡಿಸಿದರು. 

ಅವರು ಕೆಎಲ್‌ಇ ಸಂಸ್ಥೆಯ ವಾಣಿಜ್ಯ ಪದವಿ ಮಹಾವಿದ್ಯಾಲಯ ಶಿರಗುಪ್ಪಿ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಅಮೃತ ಸಮುದಾಯ ಅಭಿವೃದ್ಧಿ ಯೋಜನೆ ಶೀರ್ಷಿಕೆಯ ಅಡಿಯಲ್ಲಿ, ದತ್ತುಗ್ರಾಮ ಇಂಗಳಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರದ ಇಂದು ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.  

ಇನ್ನೊಬ್ಬರು ಕಷ್ಟದಲ್ಲಿ ಇದ್ದಾಗ ಸಹಾನುಭೂತಿಯಿಂದ ನಾವು ಸ್ಪಂದಿಸಿ ಸಾಮಾಜಿಕ ಕಾರ್ಯಗಳನ್ನು ತನು ಮನ ಭಾವ ಶುದ್ಧಿಯಿಂದ ಮಾಡುತ್ತಲೇ ರಾಷ್ಟ್ರದ ಉದ್ಧಾರಕ್ಕೆ ಪರಿಶ್ರಮಿಸಬೇಕು ಎಂದು ನುಡಿದರು. ಏಳು ದಿನಗಳ ಪಯಂರ್ತ ಇಂಗಳಿ ಗ್ರಾಮದಲ್ಲಿ ನಿಷ್ಠೆಯಿಂದ ಶ್ರಮದಾನ ಮಾಡಿದ ಶಿಬಿರಾರ್ಥಿಗಳಿಗೆ ಆಗಮಿಸಿದ್ದ ಮುಖ್ಯ ಅತಿಥಿಗಳು ಹಾಗೂ ಗಣ್ಯರು ಡಾಲ್ ಹಾಗೂ ಪದಕಗಳನ್ನು ವಿತರಿಸಿದರು.  

ಪ್ರಾಚಾರ್ಯರನ್ನು ಹಾಗೂ ಸಹ ಶಿಬಿರಾಧಿಕಾರಿ ಪ್ರೊ.ಎಲ್‌.ಎಸ್ ವಂಟಮೂರೆ ಅವರನ್ನು ಆಗಮಿಸಿದ್ದ ಗಣ್ಯರು ಸತ್ಕರಿಸಿದರು. ಶಿಬಿರದಲ್ಲಿ ಪಾಲ್ಗೊಂಡ ಹಲವು ವಿದ್ಯಾರ್ಥಿಗಳು ತಮಗಾದ ಅನುಭವಗಳನ್ನು ಅಭಿಪ್ರಾಯಗಳ ರೂಪದಲ್ಲಿ ಚೆನ್ನಾಗಿ ಹಂಚಿಕೊಂಡರು.  

ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ.ಎಸ್‌.ಬಿ.ಪಾಟೀಲ ಅವರು ಈ ಶಿಬಿರ ಅತ್ಯಂತ ಅಭೂತಪೂರ್ವ ಯಶಸ್ವಿಗೊಂಡಿದ್ದಕ್ಕೆ ಉಪಸ್ಥಿತರಿದ್ದ ಸಕಲ ಶಿಬಿರಾರ್ಥಿಗಳನ್ನು, ಹಾಗೂ ಎನ್‌.ಎಸ್‌.ಎಸ್‌. ಘಟಕದ ಉಭಯ ಶಿಬಿರಾಧಿಕಾರಿಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಶಿಬಿರಾಧಿಕಾರಿ ಎಂ.ಎಸ್‌.ಕೌಲಗುಡ್ಡ, ಪದವಿ ಕಾಲೇಜಿನ ಉಪನ್ಯಾಸಕಿ ಪ್ರೊ.ಸಿ.ಎಸ್‌.ಸುತಾರ ಕನ್ನಡ ಪ್ರಾಧ್ಯಾಪಕ ಡಾ.ಜಯವೀರ ಎ.ಕೆ. ಹಾಗೂ ಮತ್ತಿತರ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಪಲ್ಲವಿ ಕಟ್ಟಿ ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕ ಡಾ.ಜಯವೀರ ಎ.ಕೆ. ಅವರು ಸಮ್ಮಾನ ಕಾರ್ಯಕ್ರಮ ಪ್ರಸ್ತುತಪಡಿಸಿ, 7 ದಿನಗಳ ವರೆಗೆ  ನಡೆದು ಬಂದ ಶಿಬಿರದ ಹಿನ್ನೋಟದ  ವರದಿ ವಾಚಿಸಿದರು. ಲಕ್ಷ್ಮಿ ಘೋಸರವಾಡೆ ನಿರೂಪಿಸಿದರು. ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಸಂಯೋಜಕರು ಹಾಗೂ ಸಹಾಯಕ ಶಿಬಿರಾಧಿಕಾರಿ ಪ್ರೊ.ಎಲ್‌.ಎಸ್‌.ವಂಟಮೂರೆ ವಂದಿಸಿದರು. 


ಸುದ್ದಿ ಓದಿ