ಕಾರವಾರ

ಕೋವಿಡ್-19 ತಡೆಗೆ ಸ್ವಯಂ ಪ್ರೇರಿತ ಮುಂಜಾಗ್ರತೆ ಅಗತ್ಯ

ಕೋವಿಡ್-19 ತಡೆಗೆ ಸ್ವಯಂ ಪ್ರೇರಿತ ಮುಂಜಾಗ್ರತೆ ಅಗತ್ಯ

ಕಾರವಾರ 22: ಹೆಚ್ಚುತ್ತಿರುವಕೋವಿಡ್-19 ಸಾಂಕ್ರಾಮಿಕರೋಗತಡೆಗಟ್ಟಲು ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದಕಡ್ಡಾಯವಾಗಿಮಾಸ್ಕ್‍ಧಾರಣೆ, ಸ್ಯಾನಿಟೈಸರ್‍ಬಳಕೆ ಹಾಗೂ ಸಾಮಾಜಿಕಅಂತರಕಾಪಾಡಿಕೊಳ್ಳಬೇಕುಎಂದುಯುವ ಪರಿವರ್ತಕಿಲತಾದೇವಡಿಗ ಹೇಳಿದರು.

ಜಿಲ್ಲಾಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ, ಬೆಂಗಳೂರಿನ ನಿಮಾನ್ಸ್, ಜಿಲ್ಲಾಯುವ ಸ್ಪಂದನಕೇಂದ್ರಹಾಗೂ ಭಟ್ಕಳ ತಾಲೂಕಿನ ಬೆಳಕೆ ಸರಕಾರಿ ಫ್ರೌಢಶಾಲೆ ಸಹಯೋಗದಲ್ಲಿಇತ್ತೀಚಿಗೆ ನಡೆದಯುವ ಸ್ಪಂದನ ಮತ್ತು ಕೋವಿಡ್-19ಕುರಿತುಅರಿವುಕಾರ್ಯಕ್ರಮದಲ್ಲಿವಿಧ್ಯಾರ್ಥಿಗಳಿಗೆಅರಿವುಮೂಡಿಸಿ ಅವರು ಮಾತನಾಡಿದರು.

ಯುವ ಸಮುದಾಯಜಿಲ್ಲಾಯುವಸ್ಪಂದನಕೇಂದ್ರದಿಂದದೊರೆಯುವಂತಹ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಇದರಿಂದಸಂಕಷ್ಟದ ಸಂದರ್ಭಗಳಲ್ಲಿ ಓತ್ತಡನಿರ್ವಹಣೆ ಮಾಡುವ ವಿಧಾನಗಳ ಬಗ್ಗೆ ಹೆಚ್ಚಾಗಿ ತಿಳಿಯಬಹುದು. ಆಗಾಗ ಯುವಸ್ವಂದನಕೇಂದ್ರಕ್ಕೆ ಭೇಟಿ ನೀಡಿಯುವ ಸಮಾಲೋಚಕರಿಂದ ಮಾಹಿತಿ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಯುವ ಸಮುದಾಯದ ಸಮಸ್ಯೆಗಳ ನಿವಾರಣೆಗಾಗಿಯುವಸ್ವಂದನಕೇಂದ್ರವಿದ್ದು, ಅಗತ್ಯವಿದ್ದರೆಕೇಂದ್ರದದೂರವಾಣಿ ಸಂಖ್ಯೆ: 08382222332ಗೆ ಸಂಪರ್ಕಿಸಿ ಸಲಹೆ ಪಡೆದುಕೊಳ್ಳುಬಹುದುಎಂದು ತಿಳಿಸಿದರು.

ಸುದ್ದಿ ಓದಿ