ಶಾಲೆಯ ನೂತನ ಎಸ್,ಡಿ,ಎಂಸಿ ಸದಸ್ಯರ ಆಯ್ಕೆ ಕಾರ್ಯಕ್ರಮ
ಜಮಖಂಡಿ 17:ಶಾಲಾ ಅಭಿವೃದ್ಧಿ ಎಂದರೆ ಮಕ್ಕಳ ಅಭಿವೃದಿ.್ಧ ಮಕ್ಕಳ ಅಭಿವೃದ್ಧಿಯೇ ಮಾನವ ಅಭಿವೃದ್ಧಿ ಎಂಬುದು ನಮ್ಮ ಧ್ಯೇಯವಾಗಬೇಕು ಎಂದು ನೂತನ ಎಸ್.ಡಿ.ಎಂ.ಸಿ ಅದ್ಯಕ್ಷ ವೆಂಕಟೇಶ ಕಮ್ಮಾರ ಹೇಳಿದರು.
ನಗರದ ಶಾಸಕರ ಸರಕಾರಿ ಕನ್ನಡ ಪ್ರಾಥಮಿಕ ಶಾಲೆ ಗೀರೀಶ ನಗರ ಶಾಲೆಯ ನೂತನ ಎಸ್,ಡಿ,ಎಂಸಿ ಸದಸ್ಯರ ಆಯ್ಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಭಿವೃದ್ಧಿಗೆ ಶಿಕ್ಷಣ ಮುಖ್ಯ ಎಂಬುದನ್ನು ಅರಿತು ಕೆಲಸ ಮಾಡಬೇಕು. ನಮ್ಮ ಶಾಲೆಗೆ ಮುಂದಿನ ದಿನಗಳಲ್ಲಿ ಎಲ್ಲಾ ಕೆಲಸಗಳಿಗೆ ಒತ್ತು ಕೊಡುತ್ತೇವೆ ಹಾಗೂ ಶಾಲೆಯನ್ನು ಅಭಿವೃದ್ಧಿ ಪಡಿಸಲು ಎಲ್ಲರೂ ಸೇರಿ ಶ್ರಮೀಸಬೇಕು ಎಂದರು.
ಶಾಲಾ ಮುಖ್ಯ ಶಿಕ್ಷಕ ಜಗದೀಶ ಮೇತ್ರಿ ಮಾತನಾಡಿ, ಶಾಲೆಯ ನೂತನ ಎಸ್.ಡಿ.ಎಮ್.ಸಿ ಯಲ್ಲಿ ಆಯ್ಕೆಯಾಗಿರುವ ವೆಂಕಟೇಶ ಕಮ್ಮಾರ ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರೆಲ್ಲರೂ ಉತ್ಸಾಹಿಯಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ನೂತನ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಅಂಜನಾ ಶಿರಗಣ್ಣವರ, ರುಕ್ಮೀಣಿ ಗಾಡಿವಡ್ಡರ, ಸದಸ್ಯರಾಗಿ ಮಲ್ಲಿಕಾರ್ಜುನ ರೆಕುಳಗೆ, ಪಾಂಡುರಂಗ ಪೋಳ, ಕುಮಾರ ಬಾಗೇವಾಡಿ, ವಿನೋದ ದೊಡಮನಿ, ಲಾಲಸಾಬ ನದಾಫ್, ಬಾಳಕೃಷ್ಣ ಕಲಾಲ, ಸಂಜು ಕಲಾಲ, ಜಗನಾಥ ತರತರಿ, ಶೃತಿ ಮನಗೂಳಿ, ನಜೀರಾಬಾನು ಖಾಧ್ರಿ, ಅನನ್ಯ ಕುಲಕರ್ಣಿ, ಹೇಮಾ ಮಡಿವಾಳರ, ರೇಖಾ ಭಜಂತ್ರಿ, ರೇಣುಕಾ ಪೂಜಾರಿ, ಶ್ರುತಿ ಶಹಾ, ಹಾಗೂ ನಾಮನಿರ್ದೇಶಕರಾಗಿ ಆಶಾ ಮಾನೆ, ರಾಮಯ್ಯ ಪೂಜಾರಿ, ಅಜೀತ ಶಹಾ, ಅಮರೇಶ ಕಲಾಲ ಆಯ್ಕೆಯಾದರು. ಶಿಕ್ಷಕ ಆರ್.ಜಿ ಮಾಲವದೆ ಸ್ವಾಗತಿಸಿದರು, ಶಿಕ್ಷಕಿ ವಿ. ಎ. ಪಟ್ಟಣ ನಿರೂಪಿಸಿದರು. ಶಿಕ್ಷಕ ಬಿ.ಎಮ್. ಕುರುಹಿನಶೆಟ್ಟಿ ವಂದಿಸಿದರು.