ಯರಗಟ್ಟಿ

ಶೈಕ್ಷಣಿಕ ವರ್ಷದ ಇಂಗ್ಲೀಷ ತರಗತಿಗೆ ವಿದ್ಯಾರ್ಥಿಗಳ ಆಯ್ಕೆ

ಶೈಕ್ಷಣಿಕ ವರ್ಷದ ಇಂಗ್ಲೀಷ ತರಗತಿಗೆ ವಿದ್ಯಾರ್ಥಿಗಳ ಆಯ್ಕೆ

ಯರಗಟ್ಟಿ 16: ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಸನ್ 2023-24 ನೇ ಶೈಕ್ಷಣಿಕ ವರ್ಷದ ಇಂಗ್ಲೀಷ ತರಗತಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು. ಪ. ಪಂ. ಸದಸ್ಯ ಅಜೀತಕುಮಾರ ದೇಸಾಯಿ ಚೀಟಿ ಎತ್ತುವ ಮೂಲಕ 15 ಹೆಣ್ಣು ಮಕ್ಕಳು ಹಾಗೂ 15 ಗಂಡು ಮಕ್ಕಳನ್ನು ಆಯ್ಕೆ ಮಾಡಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯರು ಎ. ಎ. ಮಕ್ತುಮನವರ ರಾಜ್ಯದಲ್ಲಿ ಸುಮಾರು 250ಕ್ಕೂ ಹೆಚ್ಚು ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬೋಧನೆ ಆರಂಭಿಸಿ ಯಶಸ್ವಿಯಾಗಿರುವ ಸರಕಾರ ಇದೀಗ ಎಲ್ಲ ಶಾಲೆಗಳಲ್ಲೂ ಮಕ್ಕಳಿಗೆ ಇಂಗ್ಲೀಷ್' ತರಗತಿ ಆರಂಭಿಸಲು ಯೋಜನೆ ರೂಪಿಸಿದೆ. ಸರಕಾರಿ ಶಾಲಾ ಮಕ್ಕಳೂ ನಿರರ್ಗಳವಾಗಿ ಇಂಗ್ಲಿಷ್ ಸಂವಹನದ ಮೂಲಕ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸಮರ್ಥವಾಗಿ ಭಾಗಿಯಾಗಬೇಕೆಂಬ ಉದ್ದೇಶದಿಂದ ಇಂಗ್ಲಿಷ್ ತರಗತಿಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. 1 ರಿಂದ 8ನೇ ತರಗತಿಯವರೆಗೆ ಈ ವರ್ಷದಿಂದಲೇ ಇಂಗ್ಲಿಷ್ ತರಬೇತಿ ನೀಡುವ ಯೋಜನೆಯನ್ನು ಶಿಕ್ಷಣ ಇಲಾಖೆ ಸಿದ್ಧಪಡಿಸುತ್ತಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಸ್‌. ಬಿ. ಪಾಣಿಶೆಟ್ಟಿ, ಶಿವಾನಂದ ಮಿಕಲಿ, ಶ್ರೀಮತಿ ಎಸ್‌. ಎಸ್‌. ಹೊಸಮನಿ, ಬಿ. ಎಂ. ಸರದಾರ, ಎಸ್‌. ಎಸ್‌. ಮುತವಾಡ, ಎಸ್‌.ಡಿ.ಎಂ.ಸಿ ಸದಸ್ಯರಾದ ಶ್ರೀಮತಿ ಸಕ್ಕುಬಾಯಿ ಕುಂಬಾರ, ಗದಿಗೆಪ್ಪ ಕಡಕೋಳ, ನಂದಾ ಮುರಗೋಡ, ದೀಪಾ ಕಂಬಾರ, ನಾಗವೇಣಿ ಬಡಿಗೇರ, ಪ್ರಮೋದ ಬಡಿಗೇರ, ಇಮ್ತಿಯಾಜ ಖಾದ್ರಿ, ಅಣ್ಣಾಸಾಹೇಬ ಸುಬೇದಾರ, ಮುದ್ದಕಪ್ಪ ತಡಸಲೂರ ಸೇರಿದಂತೆ ಶಾಲಾ ಶಿಕ್ಷಕ ಸಿಬ್ಬಂದಿಯವರು ಹಾಗೂ ಪಾಲಕರು ಉಪಸ್ಥಿತರಿದ್ದರು. 


ಸುದ್ದಿ ಓದಿ