ಓಬಿಸಿ ಘಟಕದ ಪದಾಧಿಕಾರಿ ಆಯ್ಕೆ
ಇಂಡಿ 12: ಜೆಡಿಎಸ್ ಓಬಿಸಿ ನಗರ ಘಟಕದ ಅಧ್ಯಕ್ಷೆಯನ್ನಾಗಿ ಜ್ಞಾನೇಶ್ವರಿ ಚಿನ್ನಸ್ವಾಮಿ ಅವರನ್ನು ನೇಮಕ ಮಾಡಿ ತಾಲೂಕ ಅಧ್ಯಕ್ಷ ಬಿ.ಡಿ. ಪಾಟೀಲ ಮಂಗಳವಾರ ಆದೇಶ ನೀಡಿದರು.
ಸವಿತಾ ಚಲವಾದಿ, ಸುರ್ವಣ ಹಾದಿಮನಿ, ರಾಜಮಾ ಬಾಗವಾನ, ದಾವಲಜಿ ಶೇಖ, ಆಶಾ ಬಾಗವಾನ ಓಬಿಸಿ ಘಟಕದ ಪದಾಧಿಕಾರಿಗಳನ್ನಾ ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲ ಮಾತನಾಡಿ, 2023 ರ ವಿಧಾನಸಭಾ ಚುನಾವಣೆಯು ಕರ್ನಾಟಕದಲ್ಲಿ ಹೊಸ ಶಕೆ ಆರಂಭವಾಗಲಿದ್ದು, ಕನ್ನಡಿಗರ ಸ್ವಂತ ಪಕ್ಷ ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ. ಮಾಜಿ ಮುಖ್ಯಮಂತ್ರಿಗಳು ಎಚ್.ಡಿ. ಕುಮಾರಸ್ವಾಮಿಯವರು ಬಡ ಮಹಿಳೆಯರಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಷೇಶವಾಗಿ ಗರ್ಭಿಣಿ ಮಹಿಳೆಯರಿಗೆ ಮಾಸಿಕ 6 ಸಾವಿರ ರೂ. ನೀಡುದಾಗಿ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿಯವರು ಮುಖ್ಯಮಂತ್ರ ಆಗಲಿ ಎಂದು ಸರ್ವ ಮಹಿಳೆಯರು ಆರ್ಶೀವಾದ ಮಾಡಬೇಕು ಎಂದರು.
ಜೆಡಿಎಸ್ ಪಕ್ಷ ಬೇರು ಮಟ್ಟದಿಂದ ಸಂಘಟಿಸಿ, ಪಕ್ಷವನ್ನು 2023ಕ್ಕೆ ಅಧಿಕಾರಕ್ಕೆ ತರಲು ಶ್ರಮಿಸಭೆಕು. ಬಡವರು, ಅಲ್ಪಸಂಖ್ಯಾತರು, ಕಾರ್ಮಿಕರ ಕುಂದು-ಕೊರತೆಗಳ ಪರಿಹಾರಕ್ಕಾಗಿ ಸರಕಾರದ ವಿರುದ್ಧ ಸಂಘಟಿತ ಹೋರಾಟ ಮಾಡಲು ಆದೇಶದಲ್ಲಿ ತಿಳಿಸಲಾಗಿದೆ.
ಜೆಡಿಎಸ್ ಮುಖಂರಾದ ಅಯೂಬ ನಾಟೀಕಾರ, ಸಿದ್ದು ಡಂಗಾ, ಶ್ರೀಶೈಲಗೌಡ ಪಾಟೀಲ, ಸಂಜು ಪಾಯಕರ, ರಾಜಶೇಖರ ಜಮಾದಾರ, ದುಂಡು ಬಿರಾದಾರ, ಬಾಳು ರಾಠೋಡ, ರವಿ ಶಿಂದೆ ಸೇರಿದಂತೆ ಅನೇಕ ಜೆಡಿಎಸ್ ಕಾರ್ಯಕರ್ತರು ಇದ್ದರು.