ರಾಣೆಬೆನ್ನೂರ

ಲಯನ್ಸ್ ಸೇವಾ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆ

ಲಯನ್ಸ್ ಸೇವಾ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆ

ಲೋಕದರ್ಶನ ವರದಿ

ರಾಣೇಬೆನ್ನೂರು 10: ಇಲ್ಲಿನ ಲಯನ್ಸ್ ಅಂತರಾಷ್ಟ್ರೀಯ ಸೇವಾ ಸಂಸ್ಥೆಯ 2022 ಮತ್ತು 2023 ನೇ ಸಾಲಿಗಾಗಿ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚಿಗೆ ನಡೆಯಿತು. 

ನೂತನ ಅಧ್ಯಕ್ಷರಾಗಿ ಮಹೇಶ ಎಂ. ಅಡಿವೆಪ್ಪನವರ (ರಾಜಣ್ಣ), ಶಿವಾನಂದ ಬಿ ಸಂಗಾಪೂರ ಕಾರ್ಯದರ್ಶಿಯಾಗಿ ಹಾಗೂ ಖಜಾಂಚಿಯಾಗಿ ಕಿರಣ್ಕುಮಾರ ಎಲ್ ಅಂತರವಳ್ಳಿ ಅವರುಗಳು ಆಯ್ಕೆಯಾಗಿದ್ದು, ತಂಡಕ್ಕೆ ಜುಲೈ 11 ರ ಸೋಮವಾರ ಸಂಜೆ 6 ಗಂಟೆಗೆ ಮೇಡ್ಲೇರಿ ರಸ್ತೆ  ಲಯನ್ಸ್ ಶಾಲಾ ಸಬಾಭವನದಲ್ಲಿ ನಡೆಯುವ ಸಮಾರಂಭದಲ್ಲಿ ಎಂಜೆಎಫ್ ಮನೋಜ ಮಾಣೆಕ್ ಅವರು ಪ್ರತಿಜ್ಞಾವಿಧಿ ಬೋಧಿಸುವರು. ಸಂಸ್ಥೆಯ ಅಧ್ಯಕ್ಷ ವೀರಣ್ಣ ತೊಗಸಿ ಮಳೆಮಠ ಅವರು ಅಧ್ಯಕ್ಷತೆವಹಿಸುವರು. 

ವಿಶೇಷ ಆಹ್ವಾನಿತರಾಗಿ ವಿಧಾನಪರಿಷತ್ ಸದಸ್ಯ ಆರ್.ಶಂಕರ್ ಸೇರಿದಂತೆ ನಾಡಿನ ಮತ್ತಿತರ ಗಣ್ಯರು, ಸಂಘ-ಸಂಸ್ಥೆಗಳ ಮುಖಂಡರು ಪಾಲ್ಗೊಳ್ಳುವರು ಎಂದು ಅಧ್ಯಕ್ಷ ಟಿ.ವೀರಣ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ 

ಸುದ್ದಿ ಓದಿ