ಬ್ಯಾಡ್ಗಿ

ನೂತನ ಪದಾಧಿಕಾರಿಗಳ ಆಯ್ಕೆ ; ಸಮಾಜದ ಸಂಘಟನೆಗೆ ಪ್ರತಿಯೊಬ್ಬರೂ ಒತ್ತು ನೀಡಬೇಕು : ಮಂಜುನಾಥ ಉಪ್ಪಾರ

ನೂತನ ಪದಾಧಿಕಾರಿಗಳ ಆಯ್ಕೆ ; ಸಮಾಜದ ಸಂಘಟನೆಗೆ ಪ್ರತಿಯೊಬ್ಬರೂ ಒತ್ತು ನೀಡಬೇಕು : ಮಂಜುನಾಥ ಉಪ್ಪಾರ

ಬ್ಯಾಡಗಿ 24 : ಉಪ್ಪಾರ ಸಮಾಜವು ಹಿಂದುಳಿದ ಸಮಾಜವಾಗಿದ್ದು, ಎಲ್ಲರೂ ಸಂಘಟಿತರಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ನೂತನ ತಾಲೂಕಾಧ್ಯಕ್ಷ ಮಂಜುನಾಥ ಉಪ್ಪಾರ ಹೇಳಿದರು.

ಶುಕ್ರವಾರ ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರೀ ಭಗೀರಥ ಉಪ್ಪಾರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯ ಸಭೆಯಲ್ಲಿ ಮಾತನಾಡಿದರು.ಸಮಾಜದ ಸಂಘಟನೆಗೆ ಪ್ರತಿಯೊಬ್ಬರೂ ಒತ್ತು ನೀಡಬೇಕು. ಸಮಾಜದ ಸಂಘಟನೆಯಲ್ಲಿ ನಾವೆಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕು. ಅದಕ್ಕಾಗಿ ಸಮಾಜವನ್ನು ಬಲ ಪಡಿಸಲು ಪ್ರತಿಯೊಬ್ಬರು ಸನ್ನದ್ಧರಾಗಬೇಕಿದೆ ಉಪ್ಪಾರ ಸಮಾಜದ ಸಂಘಟನೆ ಹಾಗೂ ಅಭಿವೃದ್ಧಿಗೆ ಸಾರ್ವಜನಿಕರ ಪ್ರೋತ್ಸಾಹ ಮತ್ತು ಬೆಂಬಲ ಬಹಳ ಅವಶ್ಯವಾಗಿದ್ದು, ಸಮಾಜ ಕಟ್ಟಲು ಕಂಕಣ ಬದ್ಧರಾಗಿಬೇಕಿದೆ ಎಂದರು. ಮಾಜಿ ಅಧ್ಯಕ್ಷ ಮಾಲತೇಶ ಉಪ್ಪಾರ ಮಾತನಾಡಿ ಉಪ್ಪಾರ ಸಮಾಜ ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ನಮ್ಮ ಮಕ್ಕಳಿಗೆ ಸಂಸ್ಕಾರದ ಜತೆಗೆ ಶಿಕ್ಷಣದ ಅವಶ್ಯಕತೆ ಇದೆ. ಎಲ್ಲರೂ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಬೇಕು. ಸಮಾಜದ ಮುಖಂಡರು ತಮ್ಮ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯ ಬದಿಗಿಟ್ಟು ಎಲ್ಲರೂ ಸಮಾಜದ ಸಂಘಟನೆಗೆ ಒಗ್ಗೂಡಬೇಕೆಂದರಲ್ಲದೇ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಸಮಾವೇಶವು  ಇದೇ ತಿಂಗಳ 28 ರಂದು ಮಧುರೆಯ ಉಪ್ಪಾರ ಸಮಾಜದ ಶ್ರೀ ಭಗೀರಥ ಪೀಠಾಧ್ಯಕ್ಷ ಡಾ. ಪುರುಷೋತ್ತಮಾನಂದ ಪುರಿ ಹಾಗೂ ಹೊಸದುರ್ಗದ ಬ್ರಹ್ಮವಿದ್ಯಾಶ್ರೀಗಳ ನೇತೃತ್ವದಲ್ಲಿ ನಡೆಯಲಿದೆ ಎಂದರು.ನೂತನ ಶ್ರೀ ಭಗಿರತ ಉಪ್ಪಾರ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಮಂಜುನಾಥ ಉಪ್ಪಾರ, ಉಪಾಧ್ಯಕ್ಷರಾಗಿ ಶಿವಮೂರ್ತಿ ಗೊಡಚಿಹಳ್ಳಿ ಮಾಲತೇಶ ಉಪ್ಪಾರ  ಲಿಂಗರಾಜ ಹರ್ಲಾಪುರ ಕಾರ್ಯದರ್ಶಿ, ಶಂಕರ ಉಪ್ಪಾರ ಸಹಕಾರ್ಯದರ್ಶಿ ಚಂದ್ರಶೇಖರ ಆಟದವರ, ಖಜಾಂಚಿ, ಶಿವಬಸಪ್ಪ ಉಪ್ಪಾರ, ಸಂಘಟನಾ ಕಾರ್ಯದರ್ಶಿ, ವೆಂಕಟೇಶ ಉಪ್ಪಾರ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕೃಷ್ಣಪ್ಪ ಉಪ್ಪಾರ, ಬಸವರಾಜ ಬಡಗಡ್ಡಿ, ಜಗದೀಶ ಹರ್ಲಾಪುರ, ಅಶೋಕ ಹುಬ್ಬಳ್ಳಿ, ರವಿ ಉಪ್ಪಾರ, ಮಂಜುನಾಥ ಮುಂಡರಗಿ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಸಮಾಜದ ಧುರೀಣರಾದ ವಿಜಯ ಉಪ್ಪಾರ, ರವಿ ಉಪ್ಪಾರ, ಕೇಶವಮೂರ್ತಿ ಉಪ್ಪಾರ, ಜಗದೀಶ ಹರ್ಲಾಪುರ, ನಾಗರಾಜ ಉಪ್ಪಾರ, ಮಹೇಶ ಉಪ್ಪಾರ, ಶಿವಣ್ಣ ಗೊಡಚಿಹಳ್ಳಿ, ಮಾದೇವಪ್ಪ ಉಪ್ಪಾರ, ಚಂದ್ರು ಉಪ್ಪಾರ, ಜಗದೀಶ ಉಪ್ಪಾರ ಇದ್ದರು. 


ಸುದ್ದಿ ಓದಿ