ಪರೀಶೀಲನೆ ನಂತರವೇ ಮನೆ ಫಲಾನುಭವಿಗಳ ಆಯ್ಕೆ - ಪಿಡಿಓ ನಿಂಗನಗೌಡದೊಡಮನಿ
ತಾಳಿಕೋಟಿ: ಅಂಬೇಡ್ಕರ್ ಹಾಗೂ ಬಸವ ವಸತಿ ಯೋಜನೆ ಅಡಿಯಲ್ಲಿ ಸರಕಾರದಿಂದ ಮಂಜೂರಾದ ಮನೆಗಳ ಫಲಾನುಭವಿಗಳ ಆಯ್ಕೆಯನ್ನು ಖುದ್ದು ಅರ್ಜಿದಾರರ ಸಂಪೂರ್ಣ ಮಾಹಿತಿಯನ್ನು ಪರೀಶೀಲಿಸಿದ ನಂತರವೆಷ್ಟೇ ಮಾಡಲಾಗುವುದು ಎಂದು ಅಸ್ಕಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಿಮಗನಗೌಡ ದೊಡಮನಿ ತಿಳಿಸಿದರು.
ತಾಳಿಕೋಟಿ ತಾಲೂಕಿನ ಅಸ್ಕಿ ಗ್ರಾಮದಲ್ಲಿ ನಡೆದ ‘ಗ್ರಾಮ ಸಭೆ’ಯಲ್ಲಿ ಅವರು ಮಾತನಾಡಿದರು. 30 ಮನೆಗಳು ಸರಕಾರದಿಂದ ಮಂಜೂರಾಗಿದ್ದು ಇದರಲ್ಲಿ ಪರಿಶಿಷ್ಟ ಜಾತಿಗೆ-5, ಪ.ಪಂ.-2, ಹಿಂದುಳಿದ ವರ್ಗಕ್ಕೆ -3 ಹಾಗೂ ಸಾಮಾನ್ಯ ವರ್ಗಕ್ಕೆ 20 ಮನೆಗಳನ್ನು ನಿಗಧಿ ಪಡಿಸಲಾಗಿದೆ. ಸದರಿ ಮನೆಗಳಿಗಾಗಿ ಸುಮಾರು ಐದು ನೂರುಕ್ಕಿಂತಲೂ ಹೆಚ್ಚು ಅರ್ಜಿಗಳು ಬಂದಿವೆ.
ಸರಕಾರದ ಮಾನದಂಡ ಪ್ರಕಾರ ಈ ಹಿಂದೆ 15 ವರ್ಷಗಳಿಂದ ಯಾರು ಮನೆಯ ಫಲಾನುಭವಿಗಳಾಗಿದ್ದಾರೆ ಅಂತಹವರಿಗೆ ಮನೆ ನೀಡುವದಿಲ್ಲ ಹಾಗೂ ಈಗ ಮನೆ ನೀಡಿದ ಫಲಾನುಭವಿಗಳಿಗೆ ಮುಂದಿನ 15 ವರ್ಷ ಮತ್ತೆ ಮನೆ ನೀಡಲು ಬರುವದಿಲ್ಲ ಎಂದು ತಿಳಿಸಿದರು. ಈ ಮನೆಗಳನ್ನು ಅತಿ ಕಡುಬಡವ ಹಾಗೂ ಗುಡಿಸಲು ವಾಸಿಗಳಿಗೆ ನೀಡಬೇಕಾಗಿದೆ. ಆದ್ದರಿಂದ ನಾವು ಖುದ್ದಾಗಿ ಅರ್ಜಿದಾರ ಮಾಹಿತಿ ಆಧರಿಸಿ ಪರೀಶೀಲಿಸಿದ ನಂತರವಷ್ಟೇ ಫಲಾನುಭವಿಗಳನ್ನು ಆಯ್ಕೆ ಮಾಡುತ್ತೇವೆ ಎಂದರು.
ತಾಲೂಕಾ ಪಂಚಾಯತ ಸಂಯೋಜಕಿ ಎಂ.ಬಿ.ರಾಠೋಡ ಅವರು ದಿನಾಂಕ
01-10-2020 ರಿಂದ 01-09-2021ರಅವಧಿಯಲ್ಲಾದ ಸುಮಾರು 53 ಲಕ್ಷ ಮೊತ್ತದ 114 ನರೇಗಾ ಯೋಜನೆ-ಕಾಗಮಗಾರಿಗಳ ವರಿದಯ ವಿವರಣೆ ನೀಡಿದರು. ಇದರ ಮೇಲೆ ಚರ್ಚೆ ನಡೆದು ಸದರಿ ಕೆಲವು ಕಾಮಗಾರಿಗಳಲ್ಲಿ ಲೋಪದೋಷಗಳಾಗಿವೆ ಎಂದು ಗ್ರಾಮಸ್ಥರು ಗಮನಸೆಳೆದಾಗ ಇದರಲ್ಲಿ ಏನಾದರೂ ಲೋಪಗಳಾಗಿದ್ದರೆ ಅವುಗಳನ್ನು ಸರಿಪಡಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಅಸ್ಕಿ ಹಾಗೂ ನೀರಲಗಿ ಗ್ರಾಮಸ್ಥರು ತಮ್ಮಲ್ಲಿರುವ ಹಲವಾರು ಮೂಲಭೂತ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆತಂದರು. ಅವುಗಳೆಲ್ಲವನ್ನೂ ಪರಿಹರಿಸಲಾಗುವುದೆಂದು ತಿಳಿಸಿದರು.
ಅಸ್ಕಿ ಗ್ರಾಮ ಪಂಚಾಯತ ಅಧ್ಯೆಕ್ಷೆ ಹಳ್ಳೆಮ್ಮ ಕೆ.ವಣಕಿಹಾಳ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ತಾಲೂಕಾ ಕೃಷಿ ಅಧಿಕಾರಿ ಮಹೇಶ ಜೋಶಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಶ್ರೀಕಾಂತ ಪೂಜಾರಿ, ಪಶು ವೈದ್ಯಾಧಿಕಾರಿ ಅಬ್ದುಲ್ಮತೀನ ವಲ್ಲಿಭಾಯಿ, ಚಂದ್ರಶೇಖರ ದೊಡಮನಿ(ನೀರಲಗಿ), ಕೆ.ಎಂ. ತಳವಾರ, ಬಿ.ಬಿ.ಅಸ್ಕಿ, ಮಲ್ಲನಗೌಡ ಬಿರಾದಾರ,ಎಚ್.ಎನ್.ಬಿರಾದಾರ, ಶಿವನಗೌಡ ಬಿರಾದಾರ(ಅಸ್ಕಿ), ಸುಜಾತಾ ಮೊಳಳ್ಳಿ, ಅಸ್ಕಿ ಹಾಗೂ ನೀರಲಗಿ ಗ್ರಾಮಸ್ಥರು ಉಪಸ್ಥಿತರಿದ್ದರು.