ಇಂಡಿ

ಚೀಟಿ ಎತ್ತುವ ಮೂಲಕ ಫಲಾನುಭವಿಗಳ ಆಯ್ಕೆ: ಶಾಸಕ ಯಶವಂತ್ರಾಯಗೌಡ

ಚೀಟಿ ಎತ್ತುವ ಮೂಲಕ ಫಲಾನುಭವಿಗಳ ಆಯ್ಕೆ: ಶಾಸಕ ಯಶವಂತ್ರಾಯಗೌಡ

ಇಂಡಿ 05: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶಾಸಕ ಯಶವಂತ್ರಾಯಗೌಡ ಪಾಟೀಲ ಸಮ್ಮುಖದಲ್ಲಿ ಮಂಗಳವಾರರಂದು 2021-22 ನೇ ಸಾಲಿನ ಡಾ. ಬಿ.ಆರ್‌.ಅಂಬೇಡ್ಕರ್ ನಿವಾಸ ಯೋಜನೆ ಹಾಗೂ ವಾಜಪೇಯಿ ನಗರ ವಸತಿ ಯೋಜನೆಯಡಿ 75 ಫಲಾನುಭವಿಗಳನ್ನು ಚೀಟಿ ಎತ್ತುವ ಮುಖಾಂತರ ಆಯ್ಕೆ ಮಾಡಲಾಯಿತು. 

ಈ ಸಂದರ್ಭದಲ್ಲಿ ಶಾಸಕ ಯಶವಂತ್ರಾಯಗೌಡ ಪಾಟೀಲ ಮಾತನಾಡಿ, ಪಾರದರ್ಶಕವಾಗಿ ಮನೆ ವಿತರಣೆ ಮಾಡುವ ಸಲುವಾಗಿ ಚೀಟಿ ಎತ್ತುವ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.  

ಎಸ್‌ಸಿ 13, ಎಸ್‌ಟಿ 5, ಅಲ್ಪಸಂಖ್ಯಾತರು 8, ಸಾಮಾನ್ಯ 49 ಸೇರಿ ಒಟ್ಟು 75 ಫಲಾನುಭವಿಗಳನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. 

ಈ ಸಂದರ್ಭದಲ್ಲಿ ವಿಜಯಪುರದ ಯೋಜನಾ ನಿರ್ದೇಶಕರ ರಾಜಶೇಖರ ಡಂಬಳ ಪುರಸಭೆ ಮುಖ್ಯಾಧಿಕಾರಿ ಲಕ್ಷ್ಮೇಶ ಕೆಎಸ್, ಎಸ್‌ಸಿ. ಅಮರಣನವರ, ಅಶೋಕ ಚಂದನ, ಉಮೇಶ ದೇಗಿನಾಳ, ಲಿಂಬಾಜಿ ರಾಠೋಡ, ಅಯೂಬ ಬಾಗವಾನ, ಅಸ್ಲಂ ಕಡಣಿ, ಚಂದು ಕಾಲೇಬಾಗ, ಎಲ್‌.ಎಸ್‌. ಸೋಮುನಾಯಕ, ಹುಚ್ಚಪ್ಪ ಶಿವಶರಣ, ಸತೀಶ ಕುಂಬಾರ, ಸುದೀರ ಕರಿಕಟ್ಟಿ, ಭೀಮಾಶಂಕರ ಮೂರಮನ್, ಶ್ರೀಶೈಲ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸುದ್ದಿ ಓದಿ