ಡಿಕೆ ಶಿವಕುಮಾರ ಸಂಘದ ಪದಾಧಿಕಾರಿಗಳ ಆಯ್ಕೆ
ಶಿಗ್ಗಾವಿ 18: ಅಖಿಲ ಕರ್ನಾಟಕ ಡಿಕೆ ಶಿವಕುಮಾರ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಇಂದು ತಾಲೂಕಿನ ಡಿಕೆ ಶಿವಕುಮಾರ ಸಂಘದ ಪದಾಧಿಕಾರಿಗಳ ಆಯ್ಕೆಯನ್ನು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹನುಮಂತ ಬಂಡಿವಡ್ಡರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಡಿಕೆ ಶಿವಕುಮಾರ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಸಂಘ ರಚಿಸಲಾಯಿತು ಎಂದರು.
ತಾಲೂಕ ಅಧ್ಯಕ್ಷ ಗದಿಗೆಪ್ಪ ಬಳ್ಳಾರಿ, ಉಪಾಧ್ಯಕ್ಷ ರಾಮನಗೌಡ ಪಾಟೀಲ, ಪ್ರದಾನ ಕಾರ್ಯದರ್ಶಿಯಾಗಿ ಶಂಕರ ಭಜಂತ್ರಿ, ಗಣೇಶ ಕಂಕನವಾಡಿ ಮಿಡಿಯಾ ಸಂಚಾಲಕ ಪ್ರಶಾಂತ ಬಿಸರಳ್ಳಿ ಈ ಎಲ್ಲ ಪದಾಧಿಕಾರಿಗಳನ್ನು ತಾಲೂಕ ಅಧ್ಯಕ್ಷ ಗದಿಗೆಪ್ಪ ಬಳ್ಳಾರಿ ಆಯ್ಕೆಮಾಡಿ ಆದೇಶಿಸಿದ್ದಾರೆ.
ಈ ಸಂದರ್ಭದಲ್ಲಿ ಅನಿಲ ಭದ್ರಾಪೂರ,ಕಾಂತೇಶ ವಿಜಾಪೂರ, ಭರಮಪ್ಪ ಬುಳ್ಳಮ್ಮನವರ ಸೇರಿದಂತೆ ಇತರರು ಇದ್ದರು.