ಜನತಾ ಬಜಾರ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ
ಶಿಗ್ಗಾವಿ 22: ಪಟ್ಟಣದ ಜನತಾ ಬಜಾರ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ತೆರವಾದ ಸ್ಥಾನಕ್ಕೆ 11 ನಿರ್ದೇಶಕರಲ್ಲಿ 3 ಜನ ಗೈರಾಗಿದ್ದು, 9 ನಿರ್ದೇಶಕರು ಹಾಜರಿದ್ದರು ಅದರಲ್ಲಿ ಇಂದು ಅಧ್ಯಕ್ಷರಾಗಿ ಲತಾ ಗ ಹಿರೇಮಠ, ಉಪಾಧ್ಯಕ್ಷರಾಗಿ ಅಶೋಕ ಕಾಳೆ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಭಜಂತ್ರಿ ಹೇಳಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಕರಿಯಪ್ಪ ಕಟ್ಟಿಮನಿ, ಮಲ್ಲಿಕಾರ್ಜುನಗೌಡ ಪಾಟೀಲ, ಪಕ್ಕೀರಪ್ಪ ಯಲಿಗಾರ, ಶೇಖಪ್ಪ ಹಾದಿಮನಿ, ನಿಂಗನಗೌಡ ಕಾಡಪ್ಪಗೌಡ್ರ, ಶಶೀಧರ ಯಲಿಗಾರ, ಶೇಖಪ್ಪ ತಳವಾರ ಉಪಸ್ಥಿತರಿದ್ದರು.