ಬ್ಯಾಡ್ಗಿ

ನೂತನ ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆ

ನೂತನ ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆ

ಬ್ಯಾಡಗಿ 06: ತಾಲೂಕಿನ ತಡಸ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ರೂಪಾ ಹೊನ್ನಪ್ಪ ಸಣ್ಣಬಾರ್ಕಿ ಹಾಗೂ ಉಪಾಧ್ಯಕ್ಷರಾಗಿ ದೀಲೀಪ್ ಮೇಗಳಮನಿ ಚುನಾಯಿತರಾಗಿ ಆಯ್ಕೆಯಾಗಿದ್ದಾರೆ.ಗ್ರಾಮ ಪಂಚಾಯತಿ ಸಭಾಭವನದಲ್ಲಿ ಶುಕ್ರವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರೂಪಾ ಹೊನ್ನಪ್ಪ ಸಣ್ಣಬಾರ್ಕಿ ಹಾಗೂ ಶೈಲಾ ಕೇಶವಗೌಡ ಕಿತ್ತೂರ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ 7-3ಮತಗಳ ಅಂತರದಿಂದ ರೂಪಾ ಹೊನ್ನಪ್ಪ ಸಣ್ಣಬಾರ್ಕಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ದೀಲೀಪ್ ಮೇಗಳಮನಿ ಹಾಗೂ ಮಲ್ಲಿಕಾರ್ಜುನಪ್ಪ ಕಾರಗಿ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ದೀಲೀಪ್ ಮೇಗಳಮನಿ 7-3ಮತಗಳ ಅಂತರದಿಂದ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಎನ್‌. ಹರೀಶ್ ಘೋಷಿಸಿದರು.

ಈ ಸಂದರ್ಭದಲ್ಲಿ ದಾದಾಪೀರ ಹಳೇವೂರ, ಯಲ್ಲಮ್ಮ ಹಂಸಭಾವಿ, ಕರಬಸಪ್ಪ ಶಿರಗಂಬಿ, ನಾರಾಯಣಪ್ಪ ದಾಸರ, ಮೀನಾಕ್ಷಿ ತಳವಾರ, ರೇಣುಕವ್ವ ಬಣಕಾರ, ಶೈಲಾ ಕಿತ್ತೂರ, ಮಲ್ಲಿಕಾರ್ಜುನಪ್ಪ ಕಾರಗಿ, ಪಿಡಿಓ ಲತಾ ತಬರೆಡ್ಡಿ ಹಾಗೂ ಸಿಬ್ಬಂದಿ ವರ್ಗದವರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು. 


ಸುದ್ದಿ ಓದಿ