ತಾಳಿಕೋಟಿ

ಸೈನಿಕ ಶಾಲೆಗೆ ಆಯ್ಕೆ

ಸೈನಿಕ ಶಾಲೆಗೆ ಆಯ್ಕೆ


ತಾಳಿಕೋಟೆ12: ಪಟ್ಟಣದ ಎಂಜಿಎಂಕೆ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಸೈನಿಕ ಶಾಲೆಗೆ ಆಯ್ಕೆಯಾಗಿದ್ದಾರೆ. 

ಎಂಜಿಎಂಕೆ ಆಂಗ್ಲ ಮಾಧ್ಯಮ ಶಾಲೆಯ ಐದನೇ ತರಗತಿ ವಿದ್ಯಾರ್ಥಿಗಳಾದ ರೋಹಿತ ಪ್ರಕಾಶ್ ರಾಠೋಡ, ಮರಿಯಮ್ಮ ನಿಂಗಪ್ಪ ಹರಿಜನ ಸೈನಿಕ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳು, ಜನೇವರಿ 2022 ರಲ್ಲಿ ನಡೆದ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಸದರಿ ಇಬ್ಬರು ವಿದ್ಯಾರ್ಥಿಗಳು ಎಂಜಿಎಂಕೆ ಶಾಲೆಯಲ್ಲಿಯೇ ನವೋದಯ ಮತ್ತು ಸೈನಿಕ ಶಾಲೆ ಪ್ರವೇಶ ಪರೀಕ್ಷೆಗಾಗಿ ಹೆಚ್ಚುವರಿಯಾಗಿ ತರಬೇತಿಯನ್ನು ಪಡೆದುಕೊಂಡಿದ್ದರು. ಸೈನಿಕ ಶಾಲೆಗೆ ವಿದ್ಯಾರ್ಥಿಗಳು ಆಯ್ಕೆಯಾಗಿದ್ದರಿಂದ ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯ ಗುರುಮಾತೆಯರು ಹಾಗೂ ಶಿಕ್ಷಕ ವೃಂದದವರು ಹರ್ಷ ವ್ಯಕ್ತಿಪಡಿಸಿದ್ದಾರೆ. 


ಸುದ್ದಿ ಓದಿ