ಯರಗಟ್ಟಿ

ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಯರಗಟ್ಟಿ 23:  ಸಮೀಪದ ಸತ್ತಿಗೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲಾ ವಿಭಾಗದ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಶಿವಾಪೂರ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹಲವು ವಿಭಾಗಗಳಲ್ಲಿ ಗೆಲುವು ಸಾಧಿಸುವ ಮೂಲಕ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 

ಇತ್ತೀಚೆಗೆ ಯರಗಟ್ಟಿ ಪಟ್ಟಣದ ಬಾಲಾಜಿ ಪ್ರೌಢ ಶಾಲಾ ಆವರಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಶಾಲೆಯ ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ. 

ಬಾಲಕಿಯರ ವಿಭಾಗದಲ್ಲಿ 100ಮೀ ಸಹನಾ ಯಡಳ್ಳಿ ಪ್ರಥಮ, ರಶ್ಮಿ ಹೊನಕುಪ್ಪಿ, ದ್ವಿತೀಯ ಸ್ಥಾನ, 200 ಮೀ. ಓಟದಲ್ಲಿ ಶ್ರೇಯಾ ಮಿರ್ಜಿ ತೃತೀಯ 400 ಮೀ. ಓಟದಲ್ಲಿ ಅನಿತಾ ಯಡಳ್ಳಿ ಪ್ರಥಮ, 800 ಮೀ. ಓಟದಲ್ಲಿ ಲಕ್ಷ್ಮೀ ಕುಂಬಾರ ದ್ವಿತೀಯ, ಪಡೆದಿದ್ದಾರೆ. 

ಉದ್ದ ಜಿಗಿತದಲ್ಲಿ ಸಾಧಿಕಾ ಜಂಬಗಿ ದ್ವಿತೀಯ, ಎತ್ತರ ಜಿಗಿತದಲ್ಲಿ ಶಿವಮ್ಮಾ ಸಾಮೋಟಗಿ ದ್ವಿತೀಯ ಗುಂಡು ಎಸೆತದಲ್ಲಿ ಲಕ್ಷ್ಮೀ ಬಂಡಿವಡ್ಡರ ದ್ವಿತೀಯ, ಗುಂಪು ಆಟದಲ್ಲಿ ರಿಲೇ ಪ್ರಥಮ, ಕಬಡ್ಡಿ, ಖೋ ಖೋ, ಟ್ರೋ ಬಾಲ್ ಪಂದ್ಯಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. 

ಬಾಲಕರ ವಿಭಾಗದಲ್ಲಿ 100 ಮೀ. ಓಟದಲ್ಲಿ ವಿಠ್ಠಲ ಲಿಂಗರಡ್ಡಿ ದ್ವಿತೀಯ, ಅಜೀತ ಮಾದರ ತೃತೀಯ, ಸ್ಥಾನ, 200 ಮೀ. ಓಟದಲ್ಲಿ ವಿಠ್ಠಲ ಲಿಂಗರಡ್ಡಿ ಪ್ರಥಮ ಸ್ಥಾನ, 400 ಮೀ. ಓಟದಲ್ಲಿ ಆಕಾಶ ಭಜಂತ್ರಿ ಪ್ರಥಮ ಸ್ಥಾನ, ಮಣಿಕಂಠ ಪಟ್ಟಣಶೆಟ್ಟಿ ದ್ವಿತೀಯ ಸ್ಥಾನ, 800 ಮೀ ಓಟದಲ್ಲಿ ನಾಗರಾಜ ಭಾಜನವರ ಪ್ರಥಮ, ಸ್ಥಾನ,  1500 ಮೀ. ಓಟದಲ್ಲಿ ಸುರೇಶ ಸನ್ನಿಂಗನವರ ದ್ವಿತೀಯ ಸ್ಥಾನ, ಉದ್ದ ಜಿಗಿತದಲ್ಲಿ ವಿಠ್ಠಲ ಲಿಂಗರಡ್ಡಿ ಪ್ರಥಮ, ನಾಗರಾಜ ಭಾಜನವರ ದ್ವಿತೀಯ ಸ್ಥಾನ, ಎತ್ತರ ಜಿಗಿತದಲ್ಲಿ ಅಜೀತ ಮಾದರ ಪ್ರಥಮ, ಹ್ಯಾಮರ್ ಸ್ಪರ್ಧೆಯಲ್ಲಿ ಪ್ರಥಮ ಗುರು ಹರಳಿ ಪ್ರಥಮ ಸ್ಥಾನ ಗುಂಡು ಎಸೆತ ಸ್ಪರ್ಧೆಯಲ್ಲಿ ಗುರು ಹರಳಿ ದ್ವಿತೀಯ ಸ್ಥಾನ, ಚಕ್ರ ಎಸೆತದಲ್ಲಿ ಗುರು ಹರಳಿ ದ್ವತೀಯ, ಸ್ಥಾನವನ್ನು ಗಳಿಸಿ ಸಾಧನೆ ಮಾಡಿದ್ದಾರೆ. 

ಗುಂಪು ಆಟದಲ್ಲಿ ರಿಲೇ ಪ್ರಥಮ, ಕಬಡ್ಡಿ, ಖೋ ಖೋ, ವಾಲಿಬಾಲ್ ಪಂದ್ಯಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. 

ತಾಲ್ಲೂಕು ಹಂತಕ್ಕೆ ಪ್ರವೇಶ ಪಡೆದಿರುವ ಈ ಎಲ್ಲ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ವಿದ್ಯಾ ಕಲ್ಯಾಣಿ, ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಶೈಲ ಹೊಸಟ್ಟಿ, ಉಮೇಶ ಪಾಟೀಲ ಶಾಲೆಯ ಎಸ್‌.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು, ಶಾಲೆಯ ಶಿಕ್ಷಕರು ಅಭಿನಂದಿಸಿದರು. 


ಸುದ್ದಿ ಓದಿ