ಥ್ರೋಬಾಲ್ ತಂಡ ಸ್ಪರ್ಧೆಯಲ್ಲಿ ವಿಜೇತರಾಗಿ ತಾಲ್ಲೂಕ ಮಟ್ಟಕ್ಕೆ ಆಯ್ಕೆ
ಯರಗಟ್ಟಿ 05 : ತಲ್ಲೂರ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ನಡೆದ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾ ಕೂಟದಲ್ಲಿ ಯರಗಟ್ಟಿ ತಾಲ್ಲೂಕಿನ ಶ್ರೀರಂಗಪೂರ ಶಾಲೆಯ ಗಂಡು ಮಕ್ಕಳು ಗುಂಪು ಆಟ ಥ್ರೋಬಾಲ್ ಸ್ಪರ್ಧೆಯಲ್ಲಿ ವಿಜೇತರಾಗಿ ತಾಲ್ಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಫಕೀರ್ಪ ಮನಿಕಟ್ಟಿ, ಉಪಾಧ್ಯಕ್ಷ ಗಂಗಪ್ಪ ಗುಂಡ್ಲಮನಿ,ಸದಸ್ಯರಾದ ಕಲ್ಲೋಳೆಪ್ಪ ಉಪ್ಪಾರ,ಮಾಬುಸಾಬ ಸನದಿ,ರಾಜು ನದಾಫ ಹಾಗೂ ಪ್ರಧಾನ ಗುರುಗಳಾದ ವಿ.ಪಿ.ಸೊನೋನೆ,ಸಹಶಿಕ್ಷಕರಾದ ಬಿ.ಜಿ.ದೇವಡಿ ,ದೈಹಿಕ ಶಿಕ್ಷಕ ಎಮ್.ಎಫ್.ಅಗಸಿಮನಿ,ಗುರುಮಾತೆಯರಾದ ಜಿ.ಎಮ್.ಹಣಜಿ,ಜಿ.ಪಿ.ಬೆಳಗಾವಿ,ಎಸ್.ಪಿ.ರಂಗಿ,ಅತಿಥಿ ಶಿಕ್ಷಕರಾದ ಎಸ್.ಜಿ.ಸುಣಗಾರ,ಎಫ್.ಎ.ಪಚ್ಚಿನವರ,ಎಮ್.ಎಮ್.ಕಲಕುಟ್ರಿ,ಎಲ್.ಆರ್.ಸೂರಣಗಿ ಹಾಗೂ ಗ್ರಾಮದ ಗುರುಹಿರಿಯರು,ಪಾಲಕರು ವಿಜೇತರಾದ ಮಕ್ಕಳ ಸಾಧನೆಯನ್ನು ಮೆಚ್ಚಿ ಅಭಿನಂದಿಸಿ ಶುಭ ಹಾರೈಸಿದ್ದಾರೆ.