ರಾಜ್ಯ ಮಟ್ಟಕ್ಕೆ ಆಯ್ಕೆ ಉದ್ದ ಜಿಗಿತ ; ಟಿ ಸೃಷ್ಟಿ
ರಾಜ್ಯ ಮಟ್ಟಕ್ಕೆ ಆಯ್ಕೆ ಉದ್ದ ಜಿಗಿತ ; ಟಿ ಸೃಷ್ಟಿ
ಹೂವಿನ ಹಡಗಲಿ 30: 2024-25 ನೇ ಸಾಲಿನ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ ಬಾಲಕಿಯರ ಉದ್ದ ಜಿಗಿತದಲ್ಲಿ ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಟಿ ಸೃಷ್ಟಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.ವಿದ್ಯಾರ್ಥಿನಿ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ, ತಾಲೂಕು ದೈಹಿಕ ಅಧೀಕ್ಷಕರಾದ ರಫಿ ಅಹಮದ್ ಖವಾಸ್,ತುಂಗಭದ್ರಾ ವಿದ್ಯಾ ಸಂಸ್ಥೆ ಅಧ್ಯಕ್ಷ ಸಿ ವೀರಭದ್ರ್ಪ ಕಾರ್ಯದರ್ಶಿ ಡಾ ಎಂ ಧರ್ಮಣ್ಣ, ಉಪಾಧ್ಯಕ್ಷ ಸೊಪ್ಪಿನ ಮಂಜುನಾಥ ನಿರ್ದೇಶಕರಾದ ಕೆ ಎಂ ವೀರಭದ್ರಯ್ಯ, ಈ ಟಿ ಮಾಲತೇಶ್ ಗುರುವಿನ ರವೀಂದ್ರ ಮುಖ್ಯ ಗುರುಗಳಾದ ಸುರೇಶ ಅಂಗಡಿ ದೈಹಿಕ ಶಿಕ್ಷಕರಾದ ಸ್ವಾಮಿನಾಥ ರಾಮಸ್ವಾಮಿ ಶಿಕ್ಷಕ ಸಿಬ್ಬಂದಿ ಅಭಿನಂದನೆ ತಿಳಿಸಿದ್ದಾರೆ.