ರಾಷ್ಟ್ರೀಯ ಖೋ ಖೋ ಪಂದ್ಯಾವಳಿಗೆ ಆಯ್ಕೆ
ಯರಗಟ್ಟಿ 11: ದಾವಣಗೆರೆ ಕ್ರೀಡಾ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಯರಗಟ್ಟಿ ಪಟ್ಟಣದ ಕ್ರೀಡಾಪಟುಗಳಾದ ಮಲ್ಲೇಶ ಕರಿಗೊಣ್ಣವರ ಹಾಗೂ ವೆಂಕಟೇಶ ಬಂಟನೂರ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯದಿಂದ ತಂಡದ ಆಟಗಾರರಾಗಿ ಆಯ್ಕೆಯಾಗಿದ್ದಾರೆ. ಪಟ್ಟಣದ ವಿದ್ಯಾರ್ಥಿಗಳ ಈ ಕ್ರೀಡಾ ಸಾಧನೆಗೆ ಅಭಿಮನ್ಯು ಸ್ಪೋರ್ಟ್ಸ್ ಕ್ಲಬ್ ಯರಗಟ್ಟಿ ಹಾಗೂ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಅಭಿನಂದಿಸಿದ್ದಾರೆ.