ಮೇ.3 ರಂದು ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್‌ಗೆ ಆಯ್ಕೆ

ಮೇ.3 ರಂದು ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್‌ಗೆ ಆಯ್ಕೆ Selected for the National Wrestling Championship on May 3rd

ಲೋಕದರ್ಶನ ವರದಿ 

ಧಾರವಾಡ 29  : ರಾಷ್ಟ್ರೀಯ ಭಾರತೀಯ ಶೈಲಿಯ ಕುಸ್ತಿ 2024-25ನೇ ಸ್ಪರ್ಧೆಗೆ (ಚಾಂಪಿಯನ್ ಶಿಫ್) ಕರ್ನಾಟಕ ರಾಜ್ಯ ಭಾರತೀಯ ಶೈಲಿ ಕುಸ್ತಿ ಸಂಘದ ವತಿಯಿಂದ ದಿ.3.5-2026 ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಭಾರತೀಯ ಶೈಲಿ ಕುಸ್ತಿ ಸಂಘದ ಅಧ್ಯಕ್ಷ ರತನಕುಮಾರ ಮಠಪತಿ ತಿಳಿಸಿದರು.  ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮಹಾರಾಷ್ಟ್ರದ ಸಾತಾರದಲ್ಲಿ ಇದೇ ಮೇ.14 ರಿಂದ 17 ವರೆಗೆ ಭಾರತದ ಅತಿ ದೊಡ್ಡ ಪ್ರಶಸ್ತಿಯಾದ  52 ನೇ ಹಿಂದ ಕೇಸರಿ ಹಾಗೂ  4 ನೇ ಮಹಿಳಾ ಹಿಂದ್ ಕೇಸರಿ ಹಾಗೂ ಇತರೆ ತೂಕಗಳಲ್ಲಿ ನಡೆಯುವ ರಾಷ್ಟ್ರೀಯ ಭಾರತೀಯ ಶೈಲಿಯ 2024-25 ನೇ ಸಾಲಿನ ಸ್ಪರ್ಧೆಗಾಗಿ ಕರ್ನಾಟಕ ರಾಜ್ಯ ಭಾರತೀಯ ಶೈಲಿ ಕುಸ್ತಿ ಸಂಘದ ವತಿಯಿಂದ ರಾಜ್ಯ ಕುಸ್ತಿ ತಂಡವನ್ನು ಆಯ್ಕೆ ಮಾಡಲಾಗುತ್ತಿದೆ.

ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಮೇ.3 ರಂದು ಮುಂಜಾನೆ 10 ರಿಂದ 12 ವರೆಗೆ ದೇಹದ ತೂಕ ಪಡೆಯಲಾಗುವುದು. ಅದೇ ದಿನ ಸಂಜೆ 5 ರಿಂದ 8ವರೆಗೆ ತಂಡದ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ರಾಜ್ಯದ ಯಾವುದೇ ಭಾಗದ 18 ವರ್ಷ ಮೇಲ್ಪಟ್ಟ ಕುಸ್ತಿ ಪಟುಗಳು ಭಾಗವಹಿಸಬಹುದು. 18 ವರ್ಷದೊಳಗಿನವರು ಭಾಗವಹಿಸಲು ಬಯಸುವರು ಕಡ್ಡಾಯವಾಗಿ ವೈದ್ಯಕೀಯ ಪ್ರಮಾಣ ಪತ್ರ ಮತ್ತು ಪಾಲಕರ ಒಪ್ಪಿಗೆ ಪತ್ರ ತರಬೇಕು ಎಂದು ಮಠಪತಿ ತಿಳಿಸಿದರು. ಕರ್ನಾಟಕ ರಾಜ್ಯ ಭಾರತೀಯ ಶೈಲಿ ಕುಸ್ತಿ ಸಂಘದ ಕಾರ್ಯದರ್ಶಿ ಎಂ.ಆರ್‌.ಶರ್ಮಾ,ಜಿಲ್ಲಾ ಪೈಲವಾನರ ಸಂಘದ ಅಧ್ಯಕ್ಷ ನಿಂಗರಾಜ ಹಡಪದ, ಆನಂದ ಹೊಳೆಹಡಗಲಿ, ರಾಯಪ್ಪ ಬಾಗಲಕೋಟ, ನಾಗನಗೌಡ ಪಾಟೀಲ, ಕಲಂದರ ಮುಲ್ಲಾ ಇತರರು ಸುದ್ದಿಗೋಷ್ಠಿಯಲ್ಲಿದ್ದರು.