ಯರಗಟ್ಟಿ

ಕನ್ನಡ ಪುಸ್ತಕ ಪ್ರಾಧಿಕಾರದ ಸಹಾಯಧನಕ್ಕೆ ಆಯ್ಕೆ

ಕನ್ನಡ ಪುಸ್ತಕ ಪ್ರಾಧಿಕಾರದ ಸಹಾಯಧನಕ್ಕೆ ಆಯ್ಕೆ

ನಾನರಿಯೆ ಕವನ ಸಂಕಲನ 

ಯರಗಟ್ಟಿ 31: ಪಟ್ಟಣದ ಸಿ. ಎಂ. ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕುಮಾರಿ ಸವಿತಾ ಮಿಲ್ಲಾನಟ್ಟಿಯವರ 'ನಾನರಿಯೆ' ಎಂಬ ಕವನ ಸಂಕಲನವು ಕನ್ನಡ ಪುಸ್ತಕ ಪ್ರಾಧಿಕಾರವು ನೀಡುವ ಯುವ ಬರಹಗಾರರ ಚೊಚ್ಚಲ ಕೃತಿಯ ಸಹಾಯಧನಕ್ಕೆ ಆಯ್ಕೆಯಾಗಿದೆ. 

ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಅವರ ಮಾರ್ಗದರ್ಶನದಲ್ಲಿ 2021ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಯ ಸಹಾಯಧನಕ್ಕೆ  ಮೂರು ಕವನ ಸಂಕಲನ ಮತ್ತು ಒಂದು ಕಥಾ ಸಂಕಲನವನ್ನು ಸೇರಿ ಮಹಾವಿದ್ಯಾಲಯದ ನಾಲ್ಕು ವಿದ್ಯಾರ್ಥಿಗಳ  ಹಸ್ತಪ್ರತಿಗಳನ್ನು ಸಲ್ಲಿಸಲಾಗಿತ್ತು. ರಾಜ್ಯಾದ್ಯಂತ ಸಲ್ಲಿಕೆಯಾದ ಹಲವು ಪ್ರಸ್ತಾವನೆಗಳ ಪೈಕಿ ಸತ್ತಿಗೇರಿ ಗ್ರಾಮದ ಕುಮಾರಿ ಸವಿತಾ ಮಿಲ್ಲಾನಟ್ಟಿಯವರ ಕವನ ಸಂಕಲನವು ಆಯ್ಕೆಯಾಗಿದೆ. 

ಸವಿತಾ ಮಿಲ್ಲಾನಟ್ಟಿಯವರ ಈ ಸಾಧನೆಗೆ ಮತ್ತು ಮಾರ್ಗದರ್ಶನ ಮಾಡಿದ ಡಾ. ರಾಜಶೇಖರ ಬಿರಾದಾರ ಅವರ ಶ್ರಮಕ್ಕೆ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ರಾಯನಗೌಡ ಮರಿಗೌಡರ ಮತ್ತು ಹಿರಿಯ ಪ್ರಾಧ್ಯಾಪಕಿಯಾದ ಡಾ. ಸುನಂದಾ ಮಾದರ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ