ರಾಚವಿವಿ ಕಬಡ್ಡಿ ತಂಡಕ್ಕೆ ಆಯ್ಕೆ
ಗೋಕಾಕ 23: ಸ್ಥಳಿಯ ಪ್ರತಿಷ್ಠಿತ ಜೆಎಸ್ಎಸ್ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ವಿಜಯ್ ಲಕ್ಷಣ ಕಮತೆ, ಬಿ.ಎ. 5ನೇ ಸೇಮಿಸ್ಟರ್ ಇವರು 2023-24ನೇ ಶೈಕ್ಷಣಿಕ ಸಾಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪುರುಷರ ಕಬ್ಬಡ್ಡಿ ತಂಡಕ್ಕೆ ಆಯ್ಕೆಯಾಗಿ ಉತ್ತರ್ರದೇಶದ ಕಾಕಿನಾಡನಲ್ಲಿ ಜರುಗಿದ ದಕ್ಷಿಣ ವಲಯ ಮಟ್ಟದ ಅಂತರ ವಿಶ್ವವಿದ್ಯಾಲಯಗಳ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.
ಇವರಿಗೆ ಗೋಕಾಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಚೇರಮನ್ನವ್ಹಿ. ಎ. ಕಡಕೋಳ ಮತ್ತು ವಿಶ್ವಸ್ಥ ಮಂಡಳಿಯ ಚೇರಮನ್ನ ಡಾ. ಯು. ಬಿ. ಆಜರಿ ಇವರು, ಸರ್ವ ನಿರ್ದೇಶಕ ಮಂಡಳಿಯವರು, ಪ್ರಾಚಾರ್ಯ ಡಾ. ಆಶಾಲತಾ ಎಸ್. ತೇರದಾಳ, ಉಪ-ಪ್ರಾಚಾರ್ಯ ಡಾ.ಆರ್.ಎಸ್.ಬಳಿಗಾರ, ಕ್ರೀಡಾ ವಿಭಾಗದ ಉಪಾಧ್ಯಕ್ಷ ಎ. ವ್ಹಿ. ಪಾಟೀಲ, ಹೊರಾಂಗಣ ಕ್ರೀಡೆಗಳ ಕಾರ್ಯಾಧ್ಯಕ್ಷ ಎಸ್. ಎಸ್. ಚವ್ಹಾಣ, ದೈಹಿಕ ನಿರ್ದೇಶಕ ಎ. ಕೆ. ಕಿಳ್ಳಿಕೇತ ಮತ್ತು ಕಾಲೇಜಿನ ಸರ್ವ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.