ಬ್ಯಾಡ್ಗಿ

ಆಣೂರು ಭರಮದೇವರ ಗುಡ್ಡದಲ್ಲಿ ಬೀಜದುಂಡೆ ಎಸೆಯುವ ಕಾರ್ಯಕ್ರಮ

ಆಣೂರು ಭರಮದೇವರ ಗುಡ್ಡದಲ್ಲಿ ಬೀಜದುಂಡೆ ಎಸೆಯುವ ಕಾರ್ಯಕ್ರಮ

ಬ್ಯಾಡಗಿ,16 :ಎಸ್‌.ಬಿ.ಎಚ್‌. ಪ್ರೌಢಶಾಲೆ ಆಣೂರು ಗ್ರಾಮ ಬ್ಯಾಡಗಿ ತಾಲ್ಲೂಕ, ಹಾವೇರಿ ಜಿಲ್ಲಾ ಮುಂದಾಳು ಸಂಸ್ಥೆ ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ (ನೀಡ್ಸ್‌) ರಾಣೇಬೆನ್ನೂರು, ಹಾಗೂ ಜಿಲ್ಲಾ ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ ಹನುಮನಮಟ್ಟಿ, ಸುಜಲಾನ್ ಫೌಂಡೇಶನ್ ಪುಣೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಬ್ಯಾಡಗಿ ಇವರ ಸಹಯೋಗದೊಂದಿಗೆ ದಿನಾಂಕ: 15.06.2024 ರಂದು ಆಣೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜೈವಿಕ ಇಂಧನ ಯೋಜನೆ ಕುರಿತು ಅರಿವು ಮೂಡಿಸುವ ಜಾಥಾ ಮಾಡುವದರೊಂದಿಗೆ ‘ವಿಶ್ವ ಪರಿಸರ’ ದಿನಾಚರಣೆಯನ್ನು ಆಚರಿಸಲಾಯಿತು. 

ಕಾರ್ಯಕ್ರಮ ಕುರಿತು ಪ್ರಾಸ್ಥಾವಿಕವಾಗಿ ಆಣೂರು ಗ್ರಾಮದ ಎಸ್‌.ಬಿ.ಎಚ್‌. ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಚ.ಎನ್‌. ಕಳ್ಳಿಮನಿ ಮಾತನಾಡುತ್ತಾ, ನೀಡ್ಸ್‌ ಸಂಸ್ಥೆಯವರು ನಮ್ಮ ಶಾಲೆಗೆ ಬಂದು04 ದಿನಗಳ ಮುಂಚೆ ಭೇಟಿ ನೀಡಿ, ಶಾಲೆಯ 08, 09 ಹಾಗೂ 10ನೇ ತರಗತಿಯ ಮಕ್ಕಳಿಗೆ ವಿವಿಧ ಜೈವಿಕ ಇಂಧನ ಹಾಗೂ ತೊಟಗಾರಿಗೆಯ ಒಟ್ಟು8,000ಕ್ಕೂ ಅಧಿಕ ಬೀಜಗಳನ್ನು ನೀಡಿ ಅವುಗಳನ್ನು ಮಣ್ಣಿನೊಂದಿಗೆ ಬೆರೆಸಿ ಉಂಡಿಯನ್ನು ಮಾಡಿ ತಮ್ಮ ತಮ್ಮ ಮನೆಗಳ ನರಳಿನಲ್ಲಿ ವಣಗಿಸಲು ತಿಳಿಸಿದರು. ಅದೇರೀತಿ ಇಂದು ಆಣೂರು ಗ್ರಾಮದ ಭರಮದೇವರಗುಡ್ಡದಲ್ಲಿ ಶಾಲೆಯ ಮಕ್ಕಳ್ಳಿಂದ ತಯಾರಿಸಿದ ಬೀಜದುಂಡೆಗಳನ್ನು ಎಸೆಯಲಾಯಿತು. ಹೀಗೆ ಎಸೆದ ಬೀಜಗಳು ಮುಂದಿನ ದಿನಗಳಲ್ಲಿ ಮಳೆಬಂದು ಅವು ಮೊಳಕೆಯೊಡೆದು ಗಿಡಗಳಾಗಿ ಪರಿವರ್ತನೆಗೊಳುತ್ತವೆ ಹಾಗೂ ನಮ್ಮ ಪರಿಸರದಲ್ಲಿ ಸಮತೋಲನೆಯನ್ನು ಕಾಯ್ದುಕೊಳಬಹುದಾಗಿದೆ ಎಂದು ವಿವರಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೀಡ್ಸ್‌ ಸಂಸ್ಥೆಯ ಸಿ.ಇ.ಓ ಎಚ್‌.ಎಫ್ ಅಕ್ಕಿ ಮಾತನಾಡುತ್ತಾ ಜೈವಿಕ ಇಂಧನ ಭವಿಷ್ಯದ ಇಂಧನವಾಗಿದ್ದು ನಾವು ಬಳಸುತ್ತಿರುವ ಪೆಟ್ರೋಲ್, ಡೀಸಲ್ ಮುಗಿದು ಹೋಗುವ ಸಂಪನ್ಮೂಲವಾಗಿದ್ದು, ಇದರ ಬಳಕೆಯಿಂದಾಗಿ ಜಾಗತಿಕ ತಾಪಮಾನ ಹೆಚ್ಚುತ್ತದ್ದು ಮನುಕುಲ ಹಾಗೂ ಜೀವರಾಶಿಗಳ ಮೇಲೆ ವ್ಯತೀರೀಕ್ತ ಪರಿಣಾಮವನ್ನುಂಟುಮಾಡುತ್ತಿದೆ. ಆದ್ದರಿಂದ ಹಸಿರು ಇಂಧನ ಅಥವಾ ಜೈವಿಕ ಇಂಧನ ಅನಿವಾರ್ಯವಾಗಿದೆ. ಈ ಜ್ಯವಿಕ ಇಂಧನ ಸಂಪನ್ನೂಲ ಗೊಳಿಸಲು ಪ್ರತಿಯೊಬ್ಬ ನಾಗರೀಕರು ಜೈವಿಕ ಇಂಧನ ಗಿಡಗಳಾದ ಹೊಂಗೆ, ಬೇವು, ನಾಗಸಂಪಿಗೆ, ಸಿಮರುಬಾ, ಇತರೆ ಗಿಡಳನ್ನು ನೆಡುವುದರೊಂದಿಗೆ ಪಾಲನೆ ಪೋಷಣೆಯನ್ನು ಮಾಡಬೇಕೆಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಅರಣ್ಯಾಧೀಕಾರಿಗಳಾದ ಚಮನ್‌ಸಾಬ ಎಂ. ಬಿಲ್ಲಳ್ಳಿ, ಜಗದೀಶ್ ದ್ಯುಟರ್ ಹಾಗೂ ಇಲಾಖಾ ಸಿಬ್ಬಂದಿ ವರ್ಗ, ಸುಜಲಾನ್ ಫೌಂಡೇಶನ್ ಇಂಜಿನಿಯರ್ ಚಿರಂಜೀವಿ, ಸತ್ಯೇಂದ್ರ, ಮಂಜುನಾಥ, ಸಲೀಮ್, ನೀಡ್ಸ್‌ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ತಿಪ್ಪೆಶಪ್ಪ ಕನ್ನಮ್ಮನವರ್, ಜೈವಿಕ ಇಂಧನ ಯೋಜನಾ ಸಹಾಯಕಿ ಪ್ರಿಯಾಂಕ ಹಾಗೂ ಸಿಬ್ಬಂದಿ ವರ್ಗ, ಶಾಲಾ ಶಿಕ್ಷಕ ಶಿಕ್ಷಿಯರು, 132 ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ