ಶಿಗ್ಗಾವ್

ರೈತರಿಗೆ ಬೀಜ, ಗೊಬ್ಬರ ವಿತರಣೆ ಕಾರ್ಯಕ್ರಮ

ರೈತರಿಗೆ ಬೀಜ, ಗೊಬ್ಬರ ವಿತರಣೆ ಕಾರ್ಯಕ್ರಮ

ಶಿಗ್ಗಾವಿ 31: ಈ ಬಾರಿ ರೈತರಿಗೆ ಬೀಜದಲ್ಲಿ ಯಾವುದೇ ಕೊರತೆಯಾಗದಂತೆ ಕ್ರಮವನ್ನು ಜರುಗಿಸಲಾಗಿದ್ದು ದಾಸ್ತಾನು ಹೆಚ್ಚಿಗೆ ಮಾಡಿಕೊಳ್ಳಲಾಗಿದೆ ಜೊತೆಗೆ ಬೀಜದ ಮೊಳಕೆ ಪ್ರಮಾಣವನ್ನು ಪರೀಕ್ಷಿಸಿ ಬಿತ್ತನೆ ಬೀಜವನ್ನು ವಿತರಣೆ ಮಾಡಲಾಗುತ್ತಿದೆ ಎಂದು ತಾಲೂಕಾ ಸಹಾಯಕ ಕೃಷಿ ಅಧಿಕಾರಿ ಸುರೇಶ ದೀಕ್ಷೀತ ಹೇಳಿದರು. 

ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬೀಜ ಮತ್ತು ಗೊಬ್ಬರ ವಿತರಣೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಾರಿ ಸೋಯಾಬೀನ್ ಹೆಚ್ಚು ಬಿತ್ತನೆಯಾಗುವ ನೀರೀಕ್ಷೆ ಇದ್ದು ಒಂದು ವಾರ ತಡವಾಗಿ ಮುಂಗಾರು ಪ್ರಾರಂಭವಾಗಲಿದೆ, ಗೋವಿನಜೋಳ 145 ಕ್ವಿಂಟಾಲ, ಶೇಂಗಾ 210 ಕ್ಷಿಂಟಾಲ, ಸೋಯಾಬೀನ್ 1050 ಕ್ವಿಂಟಾಲಗಳಷ್ಟು ಈಗಾಗಲೇ ದಾಸ್ತಾನು ಮಾಡಿಕೊಳ್ಳಲಾಗಿದೆ, ಖಾಲಿ ಆಗಿ ಬೇಡಿಕೆ ಹೆಚ್ಚಾದಂತೆ ತರಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ, ಶಿಗ್ಗಾವಿ ತಾಲೂಕಿನಲ್ಲಿ ಯೂರಿಯಾ ಗೊಬ್ಬರವನ್ನ 712 ಮೆಟ್ರಿಕ್ ಟನ್ ನಷ್ಟು ಸೋಸೈಟಿ ಮತ್ತು ಖಾಸಗೀ ಅಂಗಡಿಗಳಲ್ಲಿ ದಾಸ್ತಾನು ಇದೆ, ಡಿಎಪಿ 155 ಮೆಟ್ರಿಕ್ ಟನ್, ಪೋಟ್ಯಾಶ್ 49 ಮೆಟ್ರಿಕ್ ಟನ್, ಕಾಂಪ್ಲೆಕ್ಸ್‌ 684 ಮೆಟ್ರಿಕ್ ಟನ್ ಸೇರಿ ಒಟ್ಟು 1600 ಮೆಟ್ರಿಕ್ ಟನ್‌ನಷ್ಟು ಗೊಬ್ಬರ ದಾಸ್ತಾನು ಇದೆ, ಇದು ತಾಲೂಕಿನ ರೈತರಿಗೆ ಬಿತ್ತನೆಗೆ ಬೇಕಾಗುಷ್ಟು ಇದೆ ಎಂದರು. 

ಒಟ್ಟಾರೆ ರೈತರಿಗೆ ಯಾವುದೇ ಕೊರತೆ ಇಲ್ಲ, ಜೊತೆಗೆ  ಕೋವಿಡ್ ಇರುವ ಕಾರಣ ರೈತರಿಗೆ ವಿತರಣೆ ಮಾಡಲು ಬೆಳಿಗ್ಗೆ 6 ರಿಂದ 10 ರ ವರೆಗೆ ಸಮಯ ನಿಗಧಿ ಮಾಡಲಾಗಿದೆ ಇದಕ್ಕೆ ರೈತರು ಮತ್ತು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿರುವ ಅವರು ರಜೆ ದಿನವೂ ವಿತರಿಸಲು ಕ್ರಮ ತೆಗೆದುಕೊಂಡಿದೆ ಸಾಮಾಜಿಕ ಅಂತರ ಕಾಪಾಡಿ ಶಾಂತಿಯುತವಾಗಿ ಪಡೆದುಕೊಳ್ಳಲು ವಿನಂತಿಸಿದ್ದಾರೆ.  

ಇದಕ್ಕೂ ಪೂರ್ವದಲ್ಲಿ ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ವಿತರಣೆಗೆ ಚಾಲನೆ ನೀಡಿದರು, ರೈತ ಸಂಘದ ಅದ್ಯಕ್ಷ ಬಸಲಿಂಗಪ್ಪ ನರಗುಂದ, ರೈತ ಮುಖಂಡರಾದ ಸಂತೋಷ ಕಟಗಿ, ಬಸವರಾಜ ಹಾವೇರಿ, ಮಂಜುನಾಥ ಹಾವೇರಿ, ಅಶೋಕ ಕಾಳೆ, ಫಕ್ಕೀರ​‍್ಪ ಕುಂದೂರ ಸಿಬ್ಬಂದಿಗಳಾದ ವನರಾಜ ಬಣಕಾರ ಸೇರಿದಂತೆ ಕೃಷಿ ಇಲಾಖೆಯ ಇನ್ನುಳಿದ ಸಿಬ್ಬಂದಿಗಳು ಹಾಗೂ ತಾಲೂಕಿನ ರೈತರು ಇದ್ದರು. 


ಸುದ್ದಿ ಓದಿ