144 ಕಲಂ ಜಾರಿಯಲ್ಲಿ: ಬಿಜೆಪಿ ಕಾರ್ಯಕರ್ತರ ಬೈಕ್ ರಾ್ಯಲಿ ತಡೆದ ಪೊಲೀಸರು
ಜಮಖಂಡಿ 05: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಫಲಿತಾಂಶ ಹೊರಬೀಳುತಿದ್ದಂತೆ ನಗರದಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಪರಸ್ಪರ ಗುಲಾಲು ಎರಚಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಕಾರ್ಯಕರ್ತರು, ಯುವಕರು ಬೈಕ್ಗಳ ಮೂಲಕ ರ್ಯಾಲಿ ನಡೆಸಿದರು.
ರಾ್ಯಲಿ ತಡೆದ ಪೊಲೀಸರು: ನಗರದ ಹೊರವಲಯದ ಮುಧೋಳ ರಸ್ತೆಯಲ್ಲಿರುವ ಶಾರದಾ ಪೆಟ್ರೋಲ್ ಪಂಪ್ನಿಂದ ನಗರದ ಪ್ರಮುಖ ಬೀದಿಗಳಲ್ಲಿ ರ್ಯಾಲಿ ನಡೆಸಲು ಬಿಜೆಪಿ ಮುಖಂಡರು ಸಿದ್ದತೆ ಮಾಡಿಕೊಂಡಿದ್ದರು. ಜೂ.7ರವರೆಗೆ ಯಾವುದೆ ರೀತಿ ಮೆರವಣಿಗೆ, ಸಂಭ್ರಮಾಚರಣೆ ಮಾಡದಂತೆ 144 ಕಲಂ ಜಾರಿಯಲ್ಲಿರುವದರಿಂದ ಮೆರವಣಿಗೆ ಮಾಡಬೇಡಿ ಎಂದು ಪೊಲೀಸರು ಪಕ್ಷದ ಮುಖಂಡರಿಗೆ ಹೇಳಿ ಮೆರವಣಗೆಯನ್ನು ತಡೆದ ಘಟನೆ ನಡೆಯಿತು.
ಬೇರೆ ಜಿಲ್ಲೆಗಳಲ್ಲಿ ಮೆರವಣಿಗೆ ಮಾಡುತಿದ್ದಾರೆ ನಾವು ಮೆರವಣಿಗೆ ಮಾಡಿಯೇ ತಿರೋಣ ಎಂದು ಕಾರ್ಯಕರ್ತರು ಪಟ್ಟು ಹಿಡಿದರು. ಇದಕ್ಕೆ ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ಸರ್ಕಾರದ ಕಾಯ್ದೆ ನಿಯಮಗಳನ್ನು ಪಾಲಿಸೋಣ, ಕೇಂದ್ರದಲ್ಲಿ ನಾವು ಅಂದುಕೊಂಡಂತೆ ಸಂಖ್ಯೆಯಲ್ಲಿ ಆಯ್ಕೆಯಾಗಿಲ್ಲ ಎಂದು ಕಾರ್ಯಕರ್ತರಿಗೆ ತಿಳಿ ಹೇಳಿದರು. ಇದಕ್ಕೆ ಕಾರ್ಯಕರ್ತರು ಒಪ್ಪದೆ ಇದ್ದಾಗ ಸ್ಥಳದಿಂದ ನಿರ್ಗಮಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ, ನಂದೆಪ್ಪ ದಡ್ಡಿಮನಿ, ನಾಗಪ್ಪ ಸನದಿ, ಮುದಕಪ್ಪ ಜಮಖಂಡಿ, ಯೋಗಪ್ಪ ಸವದಿ, ಅಜಯ ಕಡಪಟ್ಟಿ, ಪ್ರದೀಪ ಮಹಾಲಿಂಗಪೂರಮಠ, ಡಾ.ವಿಜಯಲಕ್ಷ್ಮಿ ತುಂಗಳ.ಗೀತಾ ಸೂರ್ಯವಂಶಿ, ಶ್ರೀಶೈಲ ರಾಂಬಳ್ಳಿ, ಮಲ್ಲು ಹೆಸಮನಿ, ಶ್ರೀಧರ ಕಂಬಿ, ಸಾವಿತ್ರಿ ಗೊರನಾಳ ಸೇರಿದಂತೆ ಅನೇಕರು ಇದ್ದರು.
ಫೋಟೋ : ಜಮಖಂಡಿ ನಗರದ ಹೊರವಲಯದ ಶಾರದಾ ಪೆಟ್ರೋಲ್ ಪಂಪ್ನಲ್ಲಿ ರ್ಯಾಲಿ ತಡೆದ
ಪೊಲೀಸ್ ಅಧಿಕಾರಿಗಳ ಜೊತೆ ಶಾಸಕ ಜಗದೀಶ ಗುಡಗುಂಟಿ ಮಾತನಾಡುತ್ತಿರುವುದು.