ಶಾಲಾ ಪ್ರಾರಂಭೋತ್ಸವಕ್ಕೆ ಕಾರ್ಯದರ್ಶಿ ಶ್ರೀನಿವಾಸ ಚಾಲನೆ
ಲೋಕದರ್ಶನ ವರದಿ,
ಜಮಖಂಡಿ02: ನಗರದ ಹುಲ್ಯಾಳ ಕ್ರಾಸ ಬಳಿವಿರುವ ವಿದ್ಯಾಭವನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹೂವಿನ ಸುರಿಮಳೆಯೊಂದಿಗೆ ಶಾಲಾ ಪ್ರಾರಂಭೋತ್ಸವಕ್ಕೆ ಕಾರ್ಯದರ್ಶಿ ಶ್ರೀನಿವಾಸ ಅಪರಂಜಿ ಚಾಲನೆ ನೀಡಿದರು.
ನರ್ಸರಿಯಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಸಾಲುಸಾಲಾಗಿ ಮುಖ್ಯದ್ವಾರದ ಮೂಲಕ ತರಗತಿ ಕೊಠಡಿಗಳಿಗೆ ಹೋಗುವ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರು, ಸಹಶಿಕ್ಷಕರು, ಸಿಬ್ಬಂದಿಯರುವ ಮುದ್ದು ಮಕ್ಕಳಿಗೆ ಹೂ ನೀಡುವ ಮೂಲಕ ಹೂವಿನ ಮಳೆಗೈದರು. ಅಲಂಕಾರಗೊಂಡ ಶಾಲಾ ವಾತವರಣ, ಹೂವಿನ ಸುರಿಮಳೆಯಿಂದ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.
ಸಂಸ್ಥೆ ಅಧ್ಯಕ್ಷ ಪ್ರಸಾದ ಆಪ್ಟೆ, ಪ್ರಾಚಾರ್ಯ ಅನು ಮುಲ್ಲಾ, ಆಪ್ತ ಸಮಾಲೋಚಕಿ ರಜನಿ ಬಿರಾದಾರ, ದೈಹಿಕ ಶಿಕ್ಷಕರಾದ ಬಸವರಾಜ ಬಿಳ್ಳೂರ, ಅನೀಲ ನಾಗರದಿನ್ನಿ, ಸಹಶಿಕ್ಷಕರು ಇದ್ದರು.
ಕುಂಬಾರಹಳ್ಳ ಶಾಲೆಯಲ್ಲಿ.....
ತಾಲೂಕಿನ ಕುಂಬಾರಹಳ್ಳ ಗ್ರಾಮದ ಸರಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಸಂಭ್ರಮದಿಂದ ಸರಸ್ವತಿ ಪೂಜೆಯೊಂದಿಗೆ ಶಾಲಾ ಪ್ರಾರಂಭೋತ್ಸವ ನಡೆಯಿತು. ಶಾಲಾ ಪ್ರಾರಂಭೋತ್ಸವದಲ್ಲಿ ಮಕ್ಕಳಿಗೆ ಪಠ್ಯಪುಸ್ತಕದೊಂದಿಗೆ ಹೂಗುಚ್ಚ ನೀಡಿ ಶೈಕ್ಷಣಿಕ ವರ್ಷಕ್ಕೆ ಸ್ವಾಗತಿಸಲಾಯಿತು.
ಇದೇ ಗ್ರಾ.ಪಂ.ಅಧ್ಯಕ್ಷ ನಿಂಗಪ್ಪ ತೇರದಾಳ, ನಾಗಪ್ಪ ಹೆಗಡೆ, ರಮೇಶ ಮರನೂರ, ಮಲ್ಲಪ್ಪ ಕಾಡಾಪುರ, ಸದಾಶಿವ ಮಾಳಿ, ಸಿ.ಆರ್.ಪಿ ನಾಗೇಶ ಮಾಲಗಾರ, ಮುಖ್ಯಶಿಕ್ಷಕ ನಾರಾಯಣ ಶಾಸ್ತ್ರಿ, ಶಿಕ್ಷಕರಾದ ಸಂಜೀವ ಝಾಂಬೂರೆ, ಸಂಗಮೇಶ ಉಟಗಿ, ಬಾಹುಬಲಿ ಮುತ್ತುರ, ಸವಿತಾ ಬೆನಕಟ್ಟಿ, ಆಶಿಪಾಭಾನು ಮೋಮಿನ, ಶಕುಂತಲಾ ಬಿರಾದಾರ ಇದ್ದರು.