ಗೋಕಾಕ್

ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರೌಢ ಶಿಕ್ಷಣವೇ ಅಡಿಪಾಯ-ವಿಶ್ವನಾಥ

ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರೌಢ ಶಿಕ್ಷಣವೇ ಅಡಿಪಾಯ-ವಿಶ್ವನಾಥ

ಗೋಕಾಕ 18: ತಾಲೂಕಿನ ಮಮದಾಪೂರದ ಶ್ರೀ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಗ್ರಾಮದ ಸಾಮಾಜಿಕ ಕಳಕಳಿ ಹೊಂದಿದ ಮನಸ್ಸುಗಳ ಹೃದಯಗಳ ಆಶಯದಂತೆ  ರಸಸವೀ ಫೌಂಡೇಶನ್ ಅಡಿಯಲ್ಲಿ ಪಾಕ್ಷಿಕ ’ಜ್ಞಾನಾಕ್ಷಯ’ ಚಿಂತಕರ ಚಾವಡಿ 30ನೇ ಮಾಲಿಕೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವು ಕುರಿತು ಕಾರ್ಯಕ್ರಮ ಜರುಗಿತು.  

ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಿಂತಾಮಣಿ ಪಾವಟೆ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿ, ಮುಂಬಯಿಯ ಭಾರತೀಯ ನೌಕಾ ಪಡೆಯಲ್ಲಿ ಪೆಟ್ಟೀ ಅಧಿಕಾರಿಯಾಗಿ ಸೇವೆಸಲ್ಲಿಸುತ್ತಿರುವ ವಿಶ್ವನಾಥ ಕಮತ ಓಆಂ, ಓಂ, ಂಅ ಮತ್ತು ಅಆಖ ಪರೀಕ್ಷೆಗಳಲ್ಲದೇ ಹಲವಾರು ಸ್ಪರ್ಧಾ ಪರೀಕ್ಷೆಗಳಿಗೆ ಪ್ರೌಢ ಶಿಕ್ಷಣವೇ ಅಡಿಪಾಯ ಇದರಲ್ಲಿ ಮಹಿಳೆಯರೂ ಸ್ಪರ್ಧಿಸಬಹುದು. ಈ ಹಂತದಲ್ಲಿಯೇ ಋಖ, ಋಖ, ಋಖ, ಋಖ ಹೀಗೆ ಹಲವು ಸ್ಪರ್ಧೆಗೆ ಸಿದ್ಧರಾಗುವ ಮನಸ್ಸು, ಗುರಿ ಹಾಗೂ ಛಲವನ್ನು ಇಟ್ಟುಕೊಂಡು ನಿರಂತರ ಪ್ರಯತ್ನದಲ್ಲಿರುವಂತೆ ಮಕ್ಕಳನ್ನು ಹುರಿದುಂಬಿಸುತ್ತ ಸ್ಪರ್ಧಾ ಆಸೆ ಚಿಗುರೊಡೆಯುವಂತೆ ಮಾಡಿದರು.  

ಉಪಸ್ಥಿತರಿದ್ದ ವಸತಿನಿಲಯದ ನಿಲಯ ಪಾಲಕರಾದ ಸಿದ್ಧಪ್ಪ ಕಡಕೋಳ ನಿರಂತರ ವಿದ್ಯಾರ್ಥಿಯಾಗಿದ್ದಾಗಲೇ ಅದ್ಯಯನಶೀಲರಾದರೆ ಸಾಧಕ ವ್ಯಕ್ತಿಯಾಗಿ ಹೊರಹೊಮ್ಮಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  

ಅಧ್ಯಕ್ಷತೆ ವಹಿಸಿಕೊಂಡ ಸ್ಥಳೀಯ ಪಾವಟೆ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಅಶೋಕ ತೋಟಗಿಯವರು ರಸಸವೀ ಫೌಂಡೇಶನ್ ದವರ ಕಾರ್ಯವನ್ನು ಸಂಚಾಲಕ ರ. ವೀ ದೇಮಶೆಟ್ಟಿ ಯವರ ಸಂಘಟನೆಯನ್ನು  ಶ್ಲ್ಯಾಘಿಸುತ್ತ, ಅತಿಥಿ ವಿಶ್ವನಾಥ ದ ಜ್ಞಾನ ಉಚಿತವಾಗಿ ಪಡೆಯುತ್ತಿರುವುದು ನಿಮ್ಮ ಪುಣ್ಯ. ಇಂಥ ಉಪಯುಕ್ತ ಕಾರ್ಯಕ್ರಮದ ಸದುಪಯೋಗ ಪಡೆಯದಿರುವವರ ಕುರಿತು ಕಳವಳ ವ್ಯಕ್ತ ಪಡಿಸಿದರು.  

 ಆರಂಭದಲ್ಲಿ ಸಿಂಧು ಚಳಕೊಪ್ಪ, ಶಾಲಿನಿ. ಸಬರದ ವಿಜ್ಞಾನ ಗೀತೆಯನ್ನು ಹಾಡಿದರು. ಮಾಳಪ್ಪ ಪಡಿಮನಿ ಸರ್ವರನ್ನು ಸ್ವಾಗತಿಸಿಕೊಂಡರು. ಅನಿಲ ಸುಣಧೋಳಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಪ್ರೀತಿ ಬ್ಯಾಹಟ್ಟಿ ಕೂಡಲ ಸಂಗಮನವರ ವಚನವನ್ನು ವಾಚಿಸಿದರು. 


ಸುದ್ದಿ ಓದಿ