ಧಾರವಾಡ - ಹುಬ್ಬಳ್ಳಿ

ವಿಜ್ಞಾನ ವಸ್ತು ಪ್ರದರ್ಶನ; ವಿಜ್ಞಾನದ ಬಗ್ಗೆ ಅರಿವು ಮೂಡಿಸುವುದೇ ರಾಷ್ಟ್ರೀಯ ವಿಜ್ಞಾನ ದಿನದ ಮೂಲ ಆಶಯ

ವಿಜ್ಞಾನ ವಸ್ತು ಪ್ರದರ್ಶನ; ವಿಜ್ಞಾನದ ಬಗ್ಗೆ  ಅರಿವು ಮೂಡಿಸುವುದೇ ರಾಷ್ಟ್ರೀಯ ವಿಜ್ಞಾನ ದಿನದ ಮೂಲ ಆಶಯ


ಧಾರವಾಡ  28 : ತಡಕೊಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ವಿಜ್ಞಾನ ದಿನಾಚರಣೆಯ ಉಪನ್ಯಾಸಕರಾಗಿ ಮಾತನಾಡುತ್ತಾ “ಭಾರತಕ್ಕಾಗಿ ವಿಜ್ಞಾನ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ನಾಯಕತ್ವಕ್ಕಾಗಿ ಭಾರತೀಯ ಯುವಕರನ್ನು ಸಬಲೀಕರಣಗೊಳಿಸುವುದು” ಈ ವರ್ಷದ ವಿಜ್ಞಾನ  ದಿನದ  ಉದ್ಧೇಶವಾಗಿದೆ. ವೈಜ್ಞಾನಿಕ ಚಿಂತನೆ, ನಾವೀನ್ಯತೆ ಮತ್ತು ಅರಿವನ್ನು ಪ್ರೋತ್ಸಾಹಿಸುತ್ತದೆ. ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು, ಸಂಶೋಧನೆಯನ್ನು ಉತ್ತೇಜಿಸುವುದು ಮತ್ತು ಭಾರತದ ವೈಜ್ಞಾನಿಕ ಕೊಡುಗೆಗಳನ್ನು ಎತ್ತಿ ತೋರಿಸುವುದು.  ವಿಜ್ಞಾನವಿಲ್ಲದೆ  ಸಮಾಜ  ಮುಂದುವರಿಯಲು  ಸಾಧ್ಯವಿಲ್ಲ ವೈಜ್ಞಾನಿಕ ಮನೋಭಾವ  ಬೆಳೆಸಿಕೊಳ್ಳಬೇಕೆಂದರು. 

ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ. ಮಾನವ ಕಲ್ಯಾಣಕ್ಕಾಗಿ ವಿಜ್ಞಾನ ಕ್ಷೇತ್ರದಲ್ಲಿ ಎಲ್ಲಾ ಚಟುವಟಿಕೆಗಳು, ಪ್ರಯತ್ನಗಳು ಮತ್ತು ಸಾಧನೆಗಳನ್ನು ಪ್ರದರ್ಶಿಸುವುದು ಇದರ ಉದ್ದೇಶ. ಈ ದಿನದ ಮೂಲ ಉದ್ದೇಶವೆಂದರೆ ವಿದ್ಯಾರ್ಥಿಗಳಿಗೆ ಹೊಸ ಪ್ರಯೋಗಗಳನ್ನು ಮಾಡುವಂತೆ ಪ್ರೇರೇಪಿಸುವುದು. ಅವರನ್ನು ವಿಜ್ಞಾನದತ್ತ ಆಕರ್ಷಿಸುವುದು ಮತ್ತು ವೈಜ್ಞಾನಿಕ ಸಾಧನೆಗಳ ಬಗ್ಗೆ ಅರಿವು ಮೂಡಿಸುವುದು. ಎಲ್ಲಾ ಸಮಸ್ಯೆಗಳನ್ನು ಚರ್ಚಿಸಲು ಮತ್ತು ವಿಜ್ಞಾನದ ಅಭಿವೃದ್ಧಿಗೆ ಹೊಸ ತಂತ್ರಜ್ಞಾನಗಳನ್ನು ಜಾರಿಗೆ ತರಲು ದೇಶದ ವೈಜ್ಞಾನಿಕ  ಮನಸ್ಸಿನ ನಾಗರಿಕರಿಗೆ ಅವಕಾಶ ನೀಡುವುದು. ಪ್ರೋತ್ಸಾಹಿಸುವುದರ ಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯಗೊಳಿಸುವುದು ಈ ದಿನದ ಆಶಯವಾಗಿದೆ. ವಿಜ್ಞಾನ ದಿನಾಚರಣೆಯ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಮಾದರಿ ತಯಾರಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು. ವಿಜೇತರರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯಾಧ್ಯಾಪಕರಾದ,  ಶಾಲಾ ಶಿಕ್ಷಕರ ವೃಂದದವರಾದ ಮೊದಲಾದವರು ಇದ್ದರು. 


ಸುದ್ದಿ ಓದಿ