ಕಾರವಾರ

ಶಾಲಾ ಪ್ರಾರಂಭೋತ್ಸವ ಅನಿವಾರ್ಯ : ಸಚಿವ ಹೆಬ್ಬಾರ

ಶಾಲಾ ಪ್ರಾರಂಭೋತ್ಸವ ಅನಿವಾರ್ಯ : ಸಚಿವ ಹೆಬ್ಬಾರ

ಮುಂಡಗೋಡ: 21ನೇ ಶತಮಾನ ಸ್ಪರ್ಧಾತ್ಮಕ ಯುಗವಾಗಿದ್ದು, ಅರ್ಹತೆ ಹಾಗೂ ಯೋಗ್ಯತೆಯ ಆಧಾರದ ಮೇಲೆ ಜೀವನ ರೂಪಿಸಿಕೊಳ್ಳುವಂತ ಶತಮಾನವಾಗಿರುವುದರಿಂದ ಆತಂಕದ ನಡುವೆಯು ಸಹ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪ್ರಸಕ್ತ ಸಾಲಿನ ಶಾಲಾ ಪ್ರಾರಂಭೋತ್ಸವ ಮಾಡುವುದು ಅನಿವಾರ್ಯ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.  

ಶುಕ್ರವಾರ ಪಟ್ಟಣದ ಸರಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2021-22 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಮಹಾಮಾರಿ ಕೋವಿಡ್ ನಿಂದಾಗಿ ಈಗಾಗಲೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದು, ಮುಂದಿನ ಭವಿಷ್ಯಕ್ಕಾಗಿ ಕಠೀಣ ಸವಾಲುಗಳನ್ನು ಎದುರಿಸಲೇಬೇಕಾಗಿದೆ ಎಂದರು. 

ಜಿ.ಪಂ ಸದಸ್ಯ ಎಲ್‌.ಟಿ.ಪಾಟೀಲ, ರವಿಗೌಡ ಪಾಟೀಲ, ಮುಂಡಗೋಡ ತಹಸೀಲ್ದಾರ ಶ್ರೀಧರ ಮುಂದಲಮನಿ, ಮುಖ್ಯಾಧ್ಯಾಪಕ ವಿನೋದ ನಾಯ್ಕ, ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ, ತುಕಾರಾಮ ಇಂಗಳೆ, ಕೆಂಜೋಡಿ ಗಲಬಿ, ಅರುಣ ಗೊಂದಳೆ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ