ಹೂವಿನ ಹಡಗಲಿ

ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ: ಮತಹಾಕಿ ನೈಜ ಅನುಭವ ಪಡೆದ ವಿದ್ಯಾರ್ಥಿಗಳು

ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ:  ಮತಹಾಕಿ ನೈಜ ಅನುಭವ ಪಡೆದ ವಿದ್ಯಾರ್ಥಿಗಳು

ಹೂವಿನ ಹಡಗಲಿ  26- ಪಟ್ಟಣದ ಸರ್ಕಾರಿ ಅನುದಾನಿತ ತುಂಗಭದ್ರಾ ಪ್ರೌಢಶಾಲೆಯಲ್ಲಿ 2025-26 ನೇ ಸಾಲಿನ ಶಾಲಾ ಸಂಸತ್ತಿಗೆ ಗುರುವಾರ ಚುನಾವಣೆ ನಡೆಯಿತು. ಡಾ ಬಿ ಆರ್‌ಅಂಬೇಡ್ಕರ್ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ಆಯೋಜಿಸಿದ್ದ ಚುನಾವಣೆಯಲ್ಲಿಒಟ್ಟು 356 ವಿದ್ಯಾರ್ಥಿಗಳು ತಮ್ಮ ಮತ ಹಾಕುವ ಮೂಲಕ ಚುನಾವಣೆಯ ವಿವಿಧ ಹಂತಗಳನ್ನು ಅರ್ಥೈಸಿಕೊಂಡರು.

ಕೇಂದ್ರ ರಾಜ್ಯಚುನಾವಣಾಆಯೋಗದಿಂದ ನಡೆಯುವ ರೀತಿಯಲ್ಲಿಯೇ ಮತದಾನ ನಡೆದು ಮಕ್ಕಳು ಸರದಿ ಸಾಲಿನಲ್ಲಿ ನಿಂತು ನೈಜ ಅನುಭವ ಪಡೆದರು.ಚುನಾವಣೆಯಲ್ಲಿ ಬಳಸಲಾಗುವ ರಿಜಿಸ್ಟ್ರಾರ್, ಮತಪತ್ರ, ಬ್ಯಾಲೆಟ್ ಹಾಕುವ ಬಾಕ್ಸ್‌, ಬೆರಳಿಗೆ ಅಳಿಸಲಾಗದ ಶಾಹಿ ಇತ್ಯಾದಿ ಪರಿಕರಗಳನ್ನು ಯಥಾವತ್ತಾಗಿ ಬಳಸಲಾಯಿತು.ಚುನಾವಣೆ ಅಧಿಸೂಚನೆ ಅಭ್ಯರ್ಥಿಗಳ ಉಮೇದುವಾರಿಕೆ ನಾಮಪತ್ರಗಳ ಪರೀಶೀಲನೆ ಹಿಂಪಡೆಯುವಿಕೆ, ಪ್ರಚಾರ,ಮೊದಲಾದ ಅಂಶಗಳನ್ನು ಅಳವಡಿಸಿ ಚುನಾವಣೆ ನಡೆಸಲಾಯಿತು.ಶಿಕ್ಷಣ ಇಲಾಖೆಯ ಶೈಕ್ಷಣಿಕ ಮಾರ್ಗಸೂಚಿ ಪ್ರಕಾರ ಪ್ರತಿವರ್ಷ ಶಾಲೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಜಾಗೃತಿ ಮೂಡಿಸಲುಚುನಾವಣೆ ನಡೆಸಲಾಗಿದೆಎಂದು ಸಂಚಾಲಕ ಆನಂದ್ ಜಿ ಹೇಳಿದರು.

ಚುನಾವಣಾ ಅಧಿಕಾರಿಗಳಾಗಿ ಸ್ವಾಮಿನಾಥರಾಮಸ್ವಾಮಿ ಬಸಪ್ಪ ಕೆ, ಎಲ್‌ಗಿಡ್ಡಾನಾಯ್ಕ್‌,ಗೀತಾ ಪಿ ಎಂ ಪ್ರತಿಮಾಎನ್‌ರೇಖಾಎಸ್ ಸಂತೋಷಕುಮಾರ್, ಹರೀಶ್‌ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣ ವಿದ್ಯಾರ್ಥಿಗಳಾದ ಮಂಜುನಾಥ, ಐಶ್ವರ್ಯ, ಹುಲಿಗೆಮ್ಮ, ಕೆಂಚಪ್ಪ, ಪೂಜಾ,ಪ್ರೀತಿ, ರವಿಕುಮಾರ್ ಪೂಜಾರ,ಪುನೀತ್‌ಕುಮಾರ್, ಪವಿತ್ರ,ರಾಜೇಶ್ವರಿ, ನಾಗರತ್ನ,ವೀರಭದ್ರಯ್ಯ ಎಂ ಪಿ ಎಂ ಕಾರ್ಯ ನಿರ್ವಹಿಸಿದರು.ಮುಖ್ಯ ಗುರುಗಳಾದ ಸುರೇಶಅಂಗಡಿ ಸೂಕ್ತ ಮಾರ್ಗದರ್ಶನ ನೀಡಿದರು. 


ಸುದ್ದಿ ಓದಿ